168 ನರ್ಸಿಂಗ್ ಪದವಿಧರರಿಗೆ ಉದ್ಯೋಗ

Published on

ಹುಬ್ಬಳ್ಳಿ: ಇಲ್ಲಿಯ ವಿಜಯನಗರದ ವಿಘ್ನೇಶ್ವರ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಸುಮಾರು 168 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗಿದೆ.

ಮುಂಬೈನ ಏಷಿಯನ್ ಹಾರ್ಟ್ ಇನ್‌ಸ್ಟಿಟ್ಯೂಟ್ ಹಾಸ್ಪಿಟಲ್ ಹಾಗೂ ರೀಸರ್ಚ್ ಸೆಂಟರ್ ಹಾಗೂ ಪುಣೆಯ ದಿನಾನಾಥ ಮಂಗೇಶ್ಕರ್ ಸಮೂಹ ಆಸ್ಪತ್ರೆಗಳ ಸಹಯೋಗದಲ್ಲಿ ಸಂದರ್ಶನ ನಡೆಸಲಾಯಿತು.

ರಾಜ್ಯದ 10 ಜಿಲ್ಲೆಗಳ ಸುಮಾರು 365 ನರ್ಸಿಂಗ್ ಪದವಿ ಹಾಗೂ ಡಿಪ್ಲೋಮಾ ಅಭ್ಯರ್ಥಿಗಳು ಭಾಗವಹಿಸಿದ್ದರು.

ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಉಪಯುಕ್ತ ನೇರ ಸಂದರ್ಶನ ಏರ್ಪಡಿಸಿದ ಸಂಸ್ಥೆಯ ನಿರ್ದೇಶಕ ವಿನಯಕುಮಾರ ಕೆ. ಹಾಗೂ ಪ್ರಾಂಶುಪಾಲ ಡಾ. ಚಂದ್ರಾ ಎಂ.ಎಂ. ಅವರ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷರು, ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net