ಕ್ಯಾಂಪಸ್​ ಸಂದರ್ಶನ

WEB LOGO
Published on

ವಿಜಯಪುರ: ನಗರದ ಬಿಎಲ್​ಡಿಇ ಸಂಸ್ಥೆ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್​ ಕಾಲೇಜಿನ ಆವರಣದಲ್ಲಿ ಮೇ 24 ರಂದು ಕ್ಯಾಂಪಸ್​ ಸಂದರ್ಶನ ನಡೆಯಲಿದೆ.

ಬೆಂಗಳೂರಿನ ಟೊಯೋಟಾ ಇಂಡಸ್ಟ್ರೀಸ್​ ಇಂಜಿನ್​ ಕಂಪನಿ ವತಿಯಿಂದ ಕ್ಯಾಂಪಸ್​ ಸಂದರ್ಶನ ಆಯೋಜಿಸಲಾಗಿದೆ.

2023 ಮತ್ತು 2024ನೇ ಶೈಣಿಕ ವರ್ಷದಲ್ಲಿ ಪಾಸಾದ ವಿದ್ಯಾರ್ಥಿಗಳು ಹಾಗೂ 2025ರಲ್ಲಿ 6ನೇ ಸೆಮಿಸ್ಟರ್​ ಪರೀೆಗೆ ಹಾಜರಾದ ಮೆಕ್ಯಾನಿಕಲ್​ ಇಂಜಿನಿಯರಿಂಗ್​, ಇಲೆಕ್ಟ್ರಿಕಲ್​ ಮತ್ತು ಇಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​ ಹಾಗೂ ಅಟೋಮೊಬೈಲ್​ ವಿಭಾಗದ ವಿದ್ಯಾರ್ಥಿಗಳು ಸದರಿ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಮಾಹಿತಿಗೆ ಕಾಲೇಜಿನ ಪ್ರಾಚಾರ್ಯ ಪಿ.ಬಿ. ಕಳಸಗೊಂಡ ಮತ್ತು ಉದ್ಯೋಗಾಧಿಕಾರಿ ಸುಧನ್ವ ಕುಲಕರ್ಣಿ ಹಾಗೂ ಮೊ.9480415049 ಮತ್ತು 9449246255ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net