ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಬಿಸಿಎ ಕಾಲೇಜಿನಲ್ಲಿ ಮಂಗಳವಾರ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಚಾರ್ಯ ಸಿದ್ದಲಿಂಗಪ್ಪ ಕಡಕೋಳ ಅವರು, ಮಹಾವಿದ್ಯಾಲಯವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತಹ ಮಹತ್ತರ ಕಾರ್ಯದಲ್ಲಿ ತೊಡಗಿದ್ದು, ಪ್ರಗತಿಯತ್ತ ಸಾಗುತ್ತಿದೆ. ಬೆಂಗಳೂರಿನ ಕಂಪ್ಯೂಟರ್ ಡಿಸ್ಕೌಂಟ್ ವೇರ್ಹೌಸ್ (ಸಿಡಿಡಬ್ಲೂ) ಕಂಪನಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಕೆಎಲ್ಇ ಸಂಸ್ಥೆಯ 30 ಕಾಲೇಜಿನ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು ಎಂದು ತಿಳಿಸಿದರು.
ಸಂದರ್ಶನದಲ್ಲಿ ಕಂಪನಿಯ ಎಚ್ಆರ್ ಕುಮಾರ ಎಸ್, ಶ್ರೀಶೈಲ ರಾಜಗಣಪತಿ ಹಾಗೂ ಜೈಸ್ ಜೋಸ್, ಅನ್ಸಾರಿ, ಸುರೇಶ ಪಿ, ಪ್ರಜ್ಞಾ ಶೆಟ್ಟಿ, ಸೈಪ್, ಪ್ರೊ. ಭವಾನಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.