ಪ್ರತಿಭೆ ಅನಾವರಣಕ್ಕೆ ಶಿಬಿರಗಳು ಸಹಕಾರಿ

12 ಎಸ್ಕೆಪಿ 4
ಬೇಸಿಗೆ ಶಿಬಿರದಲ್ಲಿ ಬಿ.ಡಿ.ಭೂಕಾಂತ್ ಮಾತನಾಡಿದರು. ಎಚ್.ಕೆ.ಪುಟ್ಟಪ್ಪ, ಮೌನೇಶಪ್ಪ, ಜಿ.ಎಂ.ನಾಗರಾಜ್, ಪರಶುರಾಮ ಚೌಟಗಿ ಇದ್ದರು.
Published on

ಶಿಕಾರಿಪುರ: ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದ್ದು, ಅವರ ಕ್ರಿಯಾಶೀಲತೆ ವೃದ್ಧಿಸಿಕೊಳ್ಳುವಲ್ಲಿ ಬೇಸಿಗೆ ಶಿಬಿರಗಳು ಸಹಕಾರಿ ಆಗುತ್ತವೆ ಎಂದು ಸಹಕಾರಿ ಧುರೀಣ ಬಿ.ಡಿ.ಭೂಕಾಂತ್ ಹೇಳಿದರು.

ಶಾಂತಿನಗರದ ಶ್ರೀ ಕಂತೇಸಿದ್ದೇಶ್ವರ ನಿಲಯದಲ್ಲಿ ಏರ್ಪಡಿಸಿರುವ 10 ದಿನಗಳ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡಿ, ಮಕ್ಕಳು ಎಲ್ಲ ಚಟುವಟಿಕೆಗಳನ್ನು ಸಂಪೂರ್ಣ ಕಲಿತುಕೊಳ್ಳಬೇಕು. ಸಂಗೀತ, ಚಿತ್ರಕಲೆ, ಭರತನಾಟ್ಯ, ಜಾನಪದ ಕಲೆ, ಕ್ರೀಡೆ, ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರದಲ್ಲಿ ಕಲಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಮಗುವಿನಲ್ಲಿ ಇರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಬೇಕು. ಮಕ್ಕಳ ಮನಸ್ಸು ಖಾಲಿ ಡಬ್ಬಿಯಂತೆ. ಅವುಗಳಲ್ಲಿ ಉತ್ತಮ ವಿಚಾರ, ಚಿಂತನೆಗಳನ್ನು ತುಂಬುವ ಮೂಲಕ ಸಮಾಜದ ಸ್ವಾಸ್ಥೃ ಕಾಪಾಡಬೇಕು ಎಂದರು.
ಉಪನ್ಯಾಸಕ ಎಚ್.ಕೆ.ಪುಟ್ಟಪ್ಪ ಮಾತನಾಡಿ, ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು. ಮಕ್ಕಳು ಯಾವ ವಿಷಯದ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೋ ಅಂತಹ ಕ್ಷೇತ್ರದಲ್ಲಿ ಮುಂದುವರೆಸಬೇಕು. ಅಗತ್ಯ ತರಬೇತಿ ನೀಡಬೇಕು ಎಂದರು.
ಬಸವೇಶ್ವರ ಸಹಕಾರ ಒಕ್ಕೂಟ ಸಂಘದ ಅಧ್ಯಕ್ಷ ಮೌನೇಶಪ್ಪ, ಜಾನಪದ ಕಲಾವಿದರ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ನಾಗರಾಜ್, ಉಪಾಧ್ಯಕ್ಷ ಪರಶುರಾಮ ಚೌಟಗಿ, ವೀರನಗೌಡ, ಜಾನಪದ ಕಲಾವಿದರ ಸಹಕಾರ ಸಂಘದ ನಿರ್ದೇಶಕ ಶಿವಪ್ಪ ಬೇಗೂರು, ಶಿವಮೂರ್ತಪ್ಪ, ತೀರ್ಥಲಿಂಗಪ್ಪ, ಮಲ್ಲಿಕಾರ್ಜುನಾಚಾರ್, ಕಿರಣ್‌ಕಾಂತ್, ರುದ್ರಯ್ಯ, ಗೀತಾ, ಲತಾ, ಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net