

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಭಾರತಮಾತಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ಶಿಬಿರದಲ್ಲಿ ಶಿಬಿರಾರ್ಥಿಗಳು ಸಾಮಾಜಿಕ ಸೇವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕೊಪ್ಪದಿಂದ ಬೈಲಕುಪ್ಪೆ ಮತ್ತು ಕುಶಲನಗರ ಬೈಚನಹಳ್ಳಿವರೆಗಿನ ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಸೈನ್ ಬೋರ್ಡ್‌ಗಳನ್ನು ಶಿಬಿರಾರ್ಥಿಗಳು ಸ್ವಚ್ಛಗೊಳಿಸಿದರು.
ಕುಶಾಲನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ್, ಎಎಸ್‌ಐ ಶಿವಪ್ಪ, ಮತ್ತು ಟ್ರಾಫಿಕ್ ವಿಭಾಗದ ಮುಖ್ಯ ಪೇದೆ ಧನುರ್, ಭಾರತ ಮಾತಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಫಾ.ಎಬಿನ್, ಉಪ ಪ್ರಾಂಶುಪಾಲ ಫಾ.ಟಿಟ್ಟೊ ಥಾಮಸ್, ಫಾ.ಜೈಸನ್ ಇತರರು ಹಾಜರಿದ್ದರು.