

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಎಸ್‌ಯುಸಿಐ(ಸಿ) ಅಭ್ಯರ್ಥಿ ನಾಗಜ್ಯೋತಿ ಬಿ.ಎನ್ ಬುಧವಾರ ವಿನೂತನವಾಗಿ ಪ್ರಚಾರ ಕೈಗೊಂಡರು.
ನಗರದ ಉದ್ಯಾನಗಳಿಗೆ ಬೆಳಗ್ಗೆಯೇ ಭೇಟಿ ನೀಡಿ ವಾಯು ವಿಹಾರಕ್ಕೆ ಬಂದ ಜನರಿಗೆ ಪಕ್ಷದ ಪ್ರಣಾಳಿಕೆ ಪತ್ರ ನೀಡಿ ಮತ ಯಾಚಿಸಿದರು. ಜಿಲ್ಲಾ ಪಂಚಾಯಿತಿ ಮೈದಾನ ಸೇರಿದಂತೆ ವಿವಿಧ ಮೈದಾನಗಳು ಹಾಗೂ ಉದ್ಯಾನಗಳಲ್ಲಿ ಪ್ರಚಾರ ನಡೆಸಿದರು.
ಸ್ವಾತಂತ್ರಾೃ ನಂತರ ಆಳ್ವಿಕೆ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಬಂಡವಾಳ ಶಾಹಿ ಪರ ಕೆಲಸ ಮಾಡುತ್ತಿವೆ. ಬಡವರ ಕಷ್ಟಗಳನ್ನು ಆಲಿಸುತ್ತಿಲ್ಲ. ಹೀಗಾಗಿ ಬಡವರು ಇನ್ನೂ ಬಡವರಾಗಿಯೇ ಇದ್ದಾರೆ. ಶ್ರೀಮಂತರು ಮಾತ್ರ ಶ್ರೀಮಂತರಾಗುತ್ತಲೇ ಇದ್ದಾರೆ. ಹೀಗಾಗಿ ಬಡವರು, ಕಾರ್ಮಿಕರು, ಮಹಿಳೆಯರು, ನಿರುದ್ಯೋಗಿಗಳ ಪರವಾಗಿರುವ ಎಸ್‌ಯುಸಿಐ (ಸಿ) ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ, ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಎಚ್.ಟಿ, ಸಿದ್ದಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಸುರೇಖಾ ಕಡಪಟ್ಟಿ, ಕಾವೇರಿ ರಜಪೂತ, ಲಲಿತಾ ಬಿಜ್ಜರಗಿ ಮತ್ತಿತರರಿದ್ದರು.