ಪಡಿತರ ಚೀಟಿ ತಿದ್ದುಪಡಿಗೆ ಅಭಿಯಾನ

ration card
Published on

ಕಾಸರಗೋಡು : ಸಾರ್ವಜನಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 'ತೆಲಿಮಾ ಅಭಿಯಾನ' ಯನ್ವಯ ನವೆಂಬರ್ 15ರಿಂದ ಡಿಸೆಂಬರ್ 15ರ ವರೆಗೆ ಪಡಿತರ ಚೀಟಿಗಳ ತಪ್ಪು ಸರಿಪಡಿಸಲು ಅವಕಾಶ ಕಲ್ಪಿಸಿದೆ.

ಪಡಿತರ ಚೀಟಿಯ ತಪ್ಪುಗಳನ್ನು ಸರಿಪಡಿಸಲು ಕಾರ್ಡ್‌ದಾರರಿಗೆ ಅವಕಾಶ ನೀಡುವುದರ ಜತೆಗೆ ಅನಧಿಕೃತವಾಗಿ ಆದ್ಯತಾ ಕಾರ್ಡು ಹೊಂದಿರುವವರ ಬಗ್ಗೆ ಮಾಹಿತಿ ಜತೆಗೆ ಪಡಿತರ ಡಿಪೋಗಳಲ್ಲಿನ ಆಹಾರ ಧಾನ್ಯಗಳ ಗುಣಮಟ್ಟ, ಪರವಾನಗಿದಾರರು ಯಾ ಮಾರಾಟಗಾರರ ನಡವಳಿಕೆಯ ಬಗ್ಗೆ ದೂರುಗಳ ಬಗ್ಗೆ, ಪಡಿತರ ಡಿಪೋಗಳ ನಿರ್ವಹಣೆಯ ಬಗ್ಗೆ ಪ್ರತಿಕ್ರಿಯೆಗಳನ್ನೂ ನೀಡಬಹುದಾಗಿದೆ. ತಿರಸ್ಕರಿಸಿದ ಇ-ಕೆವೈಸಿ ಹೆಸರುಗಳ ತಿದ್ದುಪಡಿಗಾಗಿ ಅರ್ಜಿಗಳನ್ನು ಸಹ ಸ್ವೀಕರಿಸಲಾಗುತ್ತದೆ. ಯೋಜನೆಯನ್ವಯ ಸಾರ್ವಜನಿಕರ ದೂರುಗಳು, ಅರ್ಜಿಗಳು ಮತ್ತು ಅಭಿಪ್ರಾಯಗಳನ್ನು ಫೋನ್ ಸಂಖ್ಯೆಯೊಂದಿಗೆ ಪಡಿತರ ಡಿಪೋಗಳಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಪೆಟ್ಟಿಗೆಯಲ್ಲಿ ಡಿ.15ರ ವರೆಗೆ ಸಲ್ಲಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 - 255138)ಸಂಪರ್ಕಿಸುವಂತೆ ಜಿಲ್ಲಾ ಸರಬರಾಜು ಅಧಿಕಾರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net