ಸಮ್ಮೇಳನದ ಪ್ರಚಾರಕ್ಕೆ ಚುರುಕುಗೊಳ್ಳಲಿ: ಮೇಲುಕೋಟೆ ಶಾಸಕ ದರ್ಶನ ಪುಟ್ಟಣಯ್ಯ ಹೇಳಿಕೆ

Campaign Committee Meeting Mandya
Published on

ಮಂಡ್ಯ: ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿಗೆ 1.30 ಕೋಟಿ ರೂ ಆಯವ್ಯಯ ನಿಗದಿಯಾಗಿದೆ. ಎಲ್ಲ ಉಪಸಮಿತಿಗಳು ಪ್ರಚಾರ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೆಲಸಗಳು ಹೆಚ್ಚು ನಡೆಯಲಿ. ಫೋಸ್ಟರ್, ಕಮಾನು, ಹೆದ್ದಾರಿ ಫಲಕಗಳು ಸೇರಿದಂತೆ ವಿವಿಧ ಪ್ರಚಾರ ಸಾಮಗ್ರಿ ವಿನ್ಯಾಸಗಳು ಆಕರ್ಷಣೀಯವಾಗಿ ಸಿದ್ದಪಡಿಸಿ. ಪ್ರತಿದಿನ ವಿವಿಧ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆಯುತ್ತಿರುವ ಕೆಲಸಗಳನ್ನು ಕ್ರೋಢಿಕರಣ ಮಾಡಿಕೊಂಡು ಮಾಹಿತಿ ಬಿಡುಗಡೆ ಮಾಡಿ ಎಂದರು.

ಈಗಾಗಲೇ ರೂಪಿಸಿರುವ ಕ್ರಿಯಾ ಯೋಜನೆಗೆ ಹೋಲಿಸಿದರೆ ಪ್ರಚಾರ ಸಮಿತಿಗೆ ನೀಡಿರುವ ಅಂದಾಜು ಅನುದಾನ ಕಡಿಮೆ ಇದೆ. ಆದ್ದರಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗುವುದು. ಪ್ರಾಯೋಜಕತ್ವದಾರನ್ನು ಸಂಪರ್ಕಿಸುವುದು ಸಹ ಸಮಿತಿಯ ಹೆಗಲ ಮೇಲಿದೆ. ಸಮಿತಿಯ ಸದಸ್ಯರು ತಂಡ ರಚಿಸಿಕೊಂಡು ಪ್ರಾಯೋಜಕತ್ವಕ್ಕೆ ಸಂಪರ್ಕಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ಪಣ್ಣೇದೊಡ್ಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net