ಯೋಗ ಸಾಧಕರ ಶಿಬಿರ

YOGA SHIBHIRA
Published on

ಗೋಕರ್ಣ: ವರ್ಧಾದ ಸಂಜೀವಿನಿ ಯೋಗ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆ ನಿಮಿತ್ತ ಇಲ್ಲಿನ ಶಾಂತಿಕೃಷ್ಣ ರೆಸಿಡೆನ್ಸಿ ಸಭಾಂಗಣದಲ್ಲಿ ಎರಡು ದಿನಗಳ ಯೋಗ ಸಾಧಕರ ಶಿಬಿರ ಆಯೋಜಿಸಲಾಯಿತು. ಶಿಬಿರವನ್ನು ಶ್ರೀಕೃಷ್ಣ ವೇದ ಪ್ರತಿಷ್ಠಾನದ ಕೃಷ್ಣಮೂರ್ತಿ ಮಯ್ಯರ್ ಉದ್ಘಾಟಿಸಿದರು.

ಯೋಗ ಕೇಂದ್ರದ ರಾಜ್ಯ ಸಂಚಾಲಕ ಜೀವೋತ್ತಮ ನಾಯಕ ಮಾತನಾಡಿ, ಯೋಗದ ಮಹತ್ವ ತಿಳಿಸಿದರು.ಪತಂಜಲಿ ಯೋಗ ಸಮಿತಿಯ ಸ್ಥಳೀಯ ಸಂಚಾಲಕ ನಾಗೇಂದ್ರ ಭಟ್ಟ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೇಂದ್ರದ ಸ್ಥಳೀಯ ಸಂಚಾಲಕಿ ಉಷಾ ರಮೇಶ ಪ್ರಸಾದ ಯೋಗಾಸನಗಳನ್ನು ಕಲಿಸಿದರು. ಡಾ. ಶೀಲಾ ಹೊಸ್ಮನೆ, ಜಯಶ್ರೀ ನಿರ್ವಾಣೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net