ಮಕ್ಕಳ ಬೇಸಿಗೆ ಉಚಿತ ಶಿಬಿರ, ಡಜನ್ ಗೂ ಹೆಚ್ಚು ಜೀವನ ಕಲೆ ಕಲಿಕೆ

Published on

ಹುಬ್ಬಳ್ಳಿ: ಇಲ್ಲಿಯ ವರೂರಿನ ನವಗ್ರಹತೀರ್ಥ ಕ್ಷೇತ್ರದಲ್ಲಿರುವ ಎಸ್ಡಿಎಂ ಜೈನ ಮಠ ಟ್ರಸ್ಟ್ನ ಎಜಿಎಂ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಮಕ್ಕಳಿಗಾಗಿ ಬೇಸಿಗೆ ಉಚಿತ ಶಿಬಿರವನ್ನು ಮೇ 6ರಿಂದ 11 ದಿನಗಳವರೆಗೆ ಏರ್ಪಡಿಸಲಾಗಿದೆ ಎಂದು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು.

ತಾಲೂಕಿನ ವರೂರ ತೀರ್ಥ ಕ್ಷೇತ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ವರ್ಷ ಮೇಲ್ಪಟ್ಟ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಆರ್ಟ ಆ್ಯಂಡ್ ಕ್ರ್ಟಾ್, ಕರಾಟೆ, ಕ್ಲೇ ಮಾಡಲಿಂಗ್, ಸ್ವಿಮ್ಮಿಂಗ್, ಯೋಗ, ಸೈಕ್ಲಿಂಗ್, ಕುದುರೆ ಸವಾರಿ, ಕುಸ್ತಿ, ಜಂಬೂ ಸವಾರಿ, ಗಾಂಧಾರಿ ವಿದ್ಯೆ, ಸಂಗೀತ ಮತ್ತು ನೃತ್ಯ, ವಿಶೇಷ ಬೋಧನೆ, ಪೇಂಟಿಂಗ್ ಹಾಗೂ ಡ್ರಾಯಿಂಗ್ ಮುಂತಾದ ಚಟುವಟಿಕೆಗಳನ್ನು ಶಿಬಿರದಲ್ಲಿ ಕಲಿಸಿಕೊಡಲಾಗುವುದು ಎಂದರು.

ಸುತ್ತಲಿನ ಹಳ್ಳಿಗಳಿಂದ 5 ಸಾವಿರ ಮಕ್ಕಳು ನೋಂದಣಿ ಮಾಡಿದ್ದಾರೆ. ಆರು ಸಾವಿರ ಮಕ್ಕಳಿಗೆ ಅವಕಾಶ ಇದೆ. ಸುಮಾರು 68 ಶಿಕ್ಷಕರು ಶಿಬಿರದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಿ ಕೊಡುವರು. ಭಾರತೀಯ ಸಂಸತಿ, ಕಲೆ, ಸಾಹಿತ್ಯ, ಪರಂಪರೆಯ ತಿಳಿವಳಿಕೆ ನೀಡಲಾಗುವುದು. ಹಲವು ವಿದ್ಯೆಗಳನ್ನು ಕಲಿಸುವ ಉದ್ದೇಶವಿದೆ. ಬರಗಾಲದ ಹಿನ್ನೆಲೆಯಲ್ಲಿ ಹಳ್ಳಿ ಹಾಗೂ ಪಟ್ಟಣದ ವಿದ್ಯಾಥಿರ್ಗಳಿಗೆ ಉಚಿತವಾಗಿ ಜೀವನ ಕಲೆ ಕಲಿಸುವ ಆಶಯದೊಂದಿಗೆ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.

ಪ್ರವೇಶ ಪರೀಕ್ಷೆ:
ಒಂದರಿಂದ 10ನೇ ತರಗತಿ ವರೆಗೆ ಇಂಗ್ಲಿಷ ಹಾಗೂ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲು ಪ್ರವೇಶ ಪರೀೆಯನ್ನು ಮೇ 12ರಂದು ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ. ಇದಲ್ಲದೇ ಅನಾಥ ಮಕ್ಕಳು, ಪಾಲಕರಿಲ್ಲದ ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಎಜಿಎಂ ಕಾಲೇಜು ಆರಂಭವಾಗಿ 10 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ 10 ವರ್ಷದಲ್ಲಿ ಇಲ್ಲಿ ಕಲಿತು ಹೋಗಿರುವ ಹಳೇ ವಿದ್ಯಾಥಿರ್ಗಳ ಗ್ಲೋಬಲ್ ಅಲ್ಯುಮ್ನಿ ಮೀಟ್ ಅನ್ನು ಮೇ 4ಕ್ಕೆ ಏರ್ಪಡಿಸಲಾಗಿದೆ ಎಂದರು. ಎಜಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಸಂದೀಪ ಕ್ಯಾತನವರ, ಬಾಹುಬಲಿ ದರೆಪ್ಪನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net