ಕ್ಯಾಂಪ್‌ಗಳ ಅಭಿವೃದ್ಧಿಗೆ ಮೂಲ ಸೌಲಭ್ಯ- ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿಕೆ

Venkata krishnayya Camp Somalingappa campaign
ಸಿರಗುಪ್ಪ ತಾಲೂಕಿನ ವೆಂಕಟಕ್ರಿಷ್ಣಯ್ಯ ಕ್ಯಾಂಪ್‌ನಲ್ಲಿ ಆಯೋಜಸಿದ್ದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿದರು.
Published on

ಸಿರಗುಪ್ಪ: ತಾಲೂಕಿನ ವರಮಯ್ಯ ಕ್ಯಾಂಪ್, ಬಂಗಾರರಾಜು ಕ್ಯಾಂಪ್, ಬೂದುಗುಪ್ಪ ಕ್ಯಾಂಪ್, ವೆಂಕಟಕ್ರಿಷ್ಣಯ್ಯಕ್ಯಾಂಪ್ ಮುಂತಾದ ಕ್ಯಾಂಪ್‌ಗಳ ಜನರಿಗೆ ಬೀದಿ ದೀಪ, ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ತಾಲೂಕಿನ ವೆಂಕಟಕ್ರಿಷ್ಣಯ್ಯ ಕ್ಯಾಂಪ್‌ನಲ್ಲಿ ಸೋಮವಾರ ಚುನಾವಣೆ ಪ್ರಚಾರದಲ್ಲಿ ಮಾತನಾಡಿ, ಪಡಿತರ ತರಲು ದೂರದ ಗ್ರಾಮಗಳಿಗೆ ತೆರಳಬೇಕಿತ್ತು, ಈ ಎಲ್ಲಾ ವ್ಯವಸ್ಥೆಯನ್ನು ನಿಮ್ಮ ಬಳಿಗೆ ಬರುವಂತೆ ಮಾಡಿದ್ದೇನೆ . ಮುಂದಿನ ದಿನಗಳಲ್ಲಿ ನಿಮ್ಮ ಕ್ಯಾಂಪ್‌ಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲು ಮತ್ತೊಮ್ಮೆ ಬಿಜೆಪಿಗೆ ನಿಮ್ಮ ಮತ ನೀಡಬೇಕೆಂದು ಮನವಿ ಮಾಡಿದರು.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಎಲ್ಲಾ ಭಾಗದ ಜನರ ಅನುಕೂಲಕ್ಕಾಗಿ ಅನೇಕ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಾವಿರಾರು ಕೋಟಿ ರೂ. ಖರ್ಚುಮಾಡಲಾಗಿದೆ. ನಿಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಬೇಕು ಎಂದು ಕರೆ ನೀಡಿದರು.

ಮಾಜಿ ಜಿಪಂ ಸದಸ್ಯ ಡಿ.ಸೋಮಪ್ಪ, ಮಾಜಿ ತಾಪಂ ಸದಸ್ಯ ಕೋರಿಪಿಡ್ಡಯ್ಯ ಪ್ರಮುಖರಾದ ಎಂ.ಎಸ್.ಕೊಮಾರೆಪ್ಪ, ತಾಳೂರು ಈರಣ್ಣ, ಬೆಟ್ಟಪ್ಪ, ಅಬ್ದುಲ್‌ರಜಾಕ್, ಗರಿಬುಲ್ಲಾ ಹಾಗೂ ವಿವಿಧ ಕ್ಯಾಂಪ್‌ಗಳ ನಿವಾಸಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net