

ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿ 2025-26ನೇ ಸಾಲಿನ ವಾರ್ಷಿಕ ಯೋಜನೆ ಅಂಗವಾಗಿ ಮಲಬಾರ್ ಕ್ಯಾನ್ಸರ್ ಕೇರ್ ಸೊಸೈಟಿ ಸಹಯೋಗದೊಂದಿಗೆ ಕ್ಯಾನ್ಸರ್ ರೋಗನಿರ್ಣಯ ಮೆಗಾ ಶಿಬಿರ ‘ಹೊಂಬೆಳಕು’ ಶನಿವಾರ ಮತ್ತು ಭಾನುವಾರ ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಶಿಬಿರದಲ್ಲಿ 300 ಜನರನ್ನು ಪರೀಕ್ಷಿಸಲಾಯಿತು. ಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಎಂ.ಶ್ರೀಧರ ಶಿಬಿರ ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರನ್, ಗೋಕುಲ್ ಮತ್ತಿತರರು ಶಿಬಿರದ ನೇತೃತ್ವ ವಹಿಸಿದ್ದರು.
ಜಿಪಂ ಸದಸ್ಯೆ ಎಂ.ಶೈಲಜಾ ಭಟ್, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯೆ ಯಶೋದಾ ಎನ್., ಕ್ಷೇಮ ಕಾರ್ಯ ಸಮಿತಿ ಅಧ್ಯಕ್ಷೆ ಸುಜಾತಾ ಎಂ.ರೈ, ಗ್ರಾ.ಪಂ. ಸದಸ್ಯರಾದ ಗೀತಾ ಬಿ.ಎನ್., ಬೇಬಿ, ಭಾಗೀರಥಿ, ವೀರೇಂದ್ರ ಕುಮಾರ್, ಶ್ರೀಪತಿ, ದುರ್ಗದೇವಿ, ಡಾ.ರವಿ ಪ್ರಸಾದ್ ಶುಭಾಶಂಸನೆಗೈದರು. ಡಾ.ಹರ್ಷ ಗಂಗಾಧರನ್ ಕ್ಯಾನ್ಸರ್ ಜಾಗೃತಿ ತರಗತಿ ನಡೆಸಿದರು.
ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಸೀನಾ ಕೆ.ಪಿ. ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ಕೆ.ಸುರೇಶ್ ಕುಮಾರ್ ವಂದಿಸಿದರು.