ಸರಸ್ವತಿ ಸದನದಲ್ಲಿ ಬೇಸಿಗೆ ಶಿಬಿರ

PTR_12 APR_7
Published on

ಪುತ್ತೂರು: ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿ ಮತ್ತು ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿದಲ್ಲಿ ಸಂಟ್ಯಾರು ಸರಸ್ವತಿಪುರಂ ಸರಸ್ವತಿ ಸದನದಲ್ಲಿ ‘ಅಭಿವ್ಯಕ್ತ-೨೦೨೫’ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.

ಆರ್ಯಾಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಉದ್ಘಾಟಿಸಿದರು. ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ರಾಜಗೋಪಾಲ್ ಬಾಳೆಗುಳಿ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ದೇವಿಪ್ರಸಾದ್ ಕಲ್ಲಾಜೆ, ಆರ್ಯಾಪು ಗ್ರಾಮ ಪಂಚಾಯಿತಿ ಹರೀಶ್ ನಾಯಕ್ ಸಂಟ್ಯಾರು, ಶಂಕರಿ ಪಟ್ಟೆ, ಯತೀಶ್ ದೇವ ಸಂಟ್ಯಾರು, ಪವಿತ್ರಾ ರೈ ತೊಟ್ಲ ಉಪಸ್ಥಿತರಿದ್ದರು.

ಶಿಬಿರ ಸಂಯೋಜಕ ಗಣೇಶ ನಾಯಕ್ ನೆಕ್ಕರೆ ಸ್ವಾಗತಿಸಿದರು. ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪುತ್ತೂರು ನಿರ್ದೇಶಕಿ ದೇವಕಿ ಸಂಟ್ಯಾರು ವಂದಿಸಿದರು. ಶಿಬಿರ ಸಂಯೋಜಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net