ಕೂಡ್ಲೂರುವಿನಲ್ಲಿ ಎ.ಎನ್.ಪಿ.ಆರ್. ಕ್ಯಾಮರಾ ಅಳವಡಿಕೆ

camera
Published on

ಕುಶಾಲನಗರ:

ಹಾಸನ ಹೆದ್ದಾರಿಯ ಕೂಡಿಗೆಯಿಂದ ಕುಶಾಲನಗರಕ್ಕೆ ಹೋಗುವ ಕೂಡಿಗೆ ಮಾರ್ಗ ಮಧ್ಯೆ ಕೂಡ್ಲೂರು ಕೈಗಾರಿಕಾ ಕೇಂದ್ರದ ಸರ್ಕಲ್‌ನಲ್ಲಿ ನೂತನ ತಂತ್ರಜ್ಞಾನದ ಎ.ಎನ್.ಪಿ.ಆರ್. ಕ್ಯಾಮರಾ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೀಷನ್ ಕ್ಯಾಮೆರಾ) ಅಳವಡಿಸಲಾಗಿದೆ.

ವಾಹನಗಳ ಚಾಲನೆ ಸಂದರ್ಭದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು, ಓವರ್ ಸ್ಪೀಡ್, ತ್ರಿಬ್ಬಲ್ ರೈಡಿಂಗ್, ಅತಿ ವೇಗವಾಗಿ ಡ್ರೈವಿಂಗ್, ಯರ್ರಾಬಿರ್ರಿ ಪಾರ್ಕಿಂಗ್ ಮತ್ತಿತರ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಡಿವಾಣ ಹಾಕಲು ಈ ಸಿ.ಸಿ. ಕ್ಯಾಮರಾ ಹಾಕಲಾಗಿದೆ.

ಬಯಲು ಬಸವೇಶ್ವರ ದೇವಾಲಯ ಹಿತರಕ್ಷಣಾ ಸಮಿತಿಯ ಯೋಜನೆಯ ಅನ್ವಯ ಸುಕ್ಷನ್ ಕಾಫಿ ಕ್ಯೂರಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಂದಾಜು 1.47. ಲಕ್ಷ ರೂ. ವೆಚ್ಚದಲ್ಲಿ ಎ.ಎನ್.ಪಿ.ಆರ್ ಕ್ಯಾಮರಾ ಅಳವಡಿಸಲಾಗಿದ್ದು ಇದು ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ಕ್ಯಾಮರಾದಲ್ಲಿ ಸೆರೆ ಆದಲ್ಲಿ ಅಟೋಮ್ಯಾಟಿಕ್ ಆಗಿ ಅದಕ್ಕೆ ಸಂಬAಧಿಸಿದ ದಂಡ ವಾಹನದ ಮಾಲೀಕರಿಗೆ ರವಾನೆ ಆಗಲಿದೆ.

ಹೀಗಾಗಿ ಕಡ್ಡಾಯವಾಗಿ ವಾಹನ ಸವಾರರು ಸಂಚಾರ ನಿಯಮ ಪಾಲಿಸುವಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೂತನ ತಂತ್ರಜ್ಞಾನದ ಕ್ಯಾಮರಾ ಅಳವಡಿಸುವ ಸಂದರ್ಭ ಮಾತನಾಡಿದ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರ ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net