

ಬೈಂದೂರು: ರಾಜ್ಯದ ಜನರನ್ನು ಗ್ಯಾರಂಟಿ ಹೆಸರಲ್ಲಿ ಮೂರ್ಖರನ್ನಾಗಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಹಂತ ಹಂತವಾಗಿ ಹಾಲು, ವಿದ್ಯುತ್, ನೋಂದಣಿ ಶುಲ್ಕ ಹಾಗೂ ಇನ್ನಿತರ ದಿನನಿತ್ಯದ ಸಾಮಗ್ರಿಗಳ ಮೇಲೆ ಏಕಾಏಕಿ ದುಪ್ಪಟ್ಟು ದರ ವಸೂಲಿ ವಾಡುತ್ತಿದೆ ಎಂದು ಜಡ್ಕಲ್ ಪಂಚಾಯಿತಿ ಉಪಾಧ್ಯಕ್ಷ ಭಾರತಿ.ಜಿ ಶೆಟ್ಟಿ ಹೇಳಿದರು.
ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರ ಜಡ್ಕಲ್ ಗ್ರಾಮ ಪಂಚಾಯಿತಿ ವಠಾರದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಜಡ್ಕಲ್ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ಶೆಟ್ಟಿ, ನಾರಾಯಣ ಶೆಟ್ಟಿ, ಸೂಲ್ಯ ಭೋವಿ, ನಾಗೇಶ್ ನಾಯ್ಕ, ಸುನೀತಾ ಮಹೇಶ್, ಸವಿತಾ ನಾಯ್ಕ, ಸ್ಥಳೀಯ ಬಿಜೆಪಿ ಪದಾಧಿಕಾರಿಗಳಾದ ತಂಗಪ್ಪನ್, ಗಣೇಶ್ ಶೆಟ್ಟಿ, ರಾವೇಂದ್ರ ಶೆಟ್ಟಿ, ಜಿ.ಬಿ.ಮೋಹನ್, ಚಂದ್ರ ಪೂಜಾರಿ ಸಳ್ಕೊಡು, ಗುತ್ತಿಗೆದಾರರಾದ ನಕ್ಷತ್ರ ಭೋವಿ, ಪ್ರಶಾಂತ ಶೆಟ್ಟಿ, ಸುಕೇತ್ ಶೆಟ್ಟಿ, ಜಡ್ಕಲ್ ಮುದೂರು ಭಾಗದ ಹಲವಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತಿಭಟನೆ ನಂತರ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಬೆಳ್ಳಾರೆ ಮತ್ತು ಪಿಡಿಒ ಸತೀಶ್ ತೋಳಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.