ನಾಳೆಯಿಂದ ತೇಜಸ್ವಿ ಪ್ರತಿಷ್ಠಾನದಲ್ಲಿ ಕ್ಯಾಲಿಗ್ರಫಿ ಕಾರ್ಯಾಗಾರ

bnk tejaswi
Published on

ಣಕಲ್: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಆ.31ರಿಂದ ಎರಡು ದಿನಗಳ ಕಾಲ ಅಕ್ಷರ ವಿಸ್ಮಯ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಾಗಾರ ನಡೆಯಲಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮದಿನದ ಪ್ರಯುಕ್ತ ಆ.31 ಮತ್ತು ಸೆ.1ರಂದು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಕ್ಯಾಲಿಗ್ರಫಿ ಕಾರ್ಯಾಗಾರ ನಡೆಯಲಿದೆ.

ಕ್ಯಾಲಿಗ್ರಫಿ ಕಲಾವಿದರಾದ ಸುರೇಶ್ ವಾಘ್ಮೋರ್, ಜಿ. ಹರಿಕುಮಾರ್, ಟಿ.ಬಿ.ಕೋಡಿಹಳ್ಳಿ, ಇ.ಮೋಹನ್‌ಕುಮಾರ್, ಅನಿಮಿಷಾ ನಾಗನೂರ್ ಹಾಗೂ ಶ್ರೀಹರ್ಷ ಅವರು ಕ್ಯಾಲಿಗ್ರಫಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು ತೇಜಸ್ವಿ ಸಾಲುಗಳಿಗೆ ಅಕ್ಷರ ವಿನ್ಯಾಸ ಮಾಡಲಿದ್ದಾರೆ. ಎರಡು ದಿನಗಳ ಕಾಲ ಕ್ಯಾಲಿಗ್ರಫಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ರಚಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 50 ಕ್ಕೂ ಹೆಚ್ಚು ಕ್ಯಾಲಿಗ್ರಫಿ ಕಲಾಕತಿಗಳ ಪ್ರದರ್ಶನ ಸೆ.8ರಂದು ನಡೆಯಲಿದೆ. ಅಂದು ನಡೆಯುವ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ತೇಜಸ್ವಿ ಕುರಿತು ಮಾತನಾಡಲಿದ್ದಾರೆ. ಮಾಹಿತಿಗೆ 08263200012, 9663098873 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net