2023ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಕೃತಿಗಳ ಆಹ್ವಾನ

application
Published on

ಮೈಸೂರು: ಜಗದ್ಗುರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ವೀರಶೈವ/ಲಿಂಗಾಯತ ಧರ್ಮ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಕಲೆಗೆ ಸಂಬಂಧಿಸಿದಂತೆ 2023ನೇ ಸಾಲಿನಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಆಹ್ವಾನಿಸಲಾಗಿದೆ.

ಲೇಖಕರು ಹಾಗೂ ಪ್ರಕಾಶಕರು ಪ್ರಕಟಿತ ಕೃತಿಗಳನ್ನು ಪ್ರಶಸ್ತಿ ಸಮಿತಿಯ ಅವಗಾಹನೆಗಾಗಿ ನಿರ್ದೇಶಕರು, ಪ್ರಕಟಣ ವಿಭಾಗ, ಜೆಎಸ್‌ಎಸ್ ಮಹಾವಿದ್ಯಾಪೀಠ, ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ಮೈಸೂರು 570004 ವಿಳಾಸಕ್ಕೆ 31 ಮಾರ್ಚ್ 2024ರ ಒಳಗಾಗಿ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದೆ. ಉತ್ತಮ ಕೃತಿಗಳಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಯನ್ನು 1983ರಿಂದ ಪ್ರತಿವರ್ಷ ನೀಡಲಾಗುತ್ತಿದೆ.

ಪ್ರಶಸ್ತಿಯು ಪ್ರಶಸ್ತಿಫಲಕ, ಸ್ವಸ್ತಿವಾಚನ, ಫಲತಾಂಬೂಲ ಹಾಗೂ 25,000 ರೂ.ಗಳ ಗೌರವಧನವನ್ನು ಒಳಗೊಂಡಿರುತ್ತದೆ. ಈ ಬಗ್ಗೆ ಮಾಹಿತಿ ಲಭ್ಯವಿರುವ ಸಾಹಿತ್ಯಾಸಕ್ತರು ಕೂಡ ಕೃತಿಗಳ ವಿವರಗಳನ್ನು ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ 9964161363 ಅನ್ನು ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net