ಖಾಲಿ ಮಳಿಗೆಗಳಿಗೆ ಟೆಂಡರ್ ಕರೆಯಿರಿ

11hos6p vartakara strike
ಹೊಸನಗರ ಬಸ್ಸ್ ನಿಲ್ದಾಣದ ಆವರಣದಲ್ಲಿರುವ ಖಾಲಿ ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ವರ್ತಕರ ಸಂಘದಿAದ ಪ್ರತಿಭಟನೆ ನಡೆಸಲಾಯಿತು. ವರ್ತಕ ಕನಕರಾಜ್, ದೀಪಕ್ ಸ್ವರೂಪ್, ಹರೀಶ್, ವಾದಿರಾಜ್ ಭಟ್, ಸುದೇಶ್ ಕಾಮತ್ ಇತರರಿದ್ದರು.
Published on

ಹೊಸನಗರ: ಪಟ್ಟಣದ ಬಸ್ ನಿಲ್ದಾಣದ ಬಳಿ ಖಾಲಿ ಇರುವ 8 ಅಂಗಡಿ ಮಳಿಗೆಗಳು ಮತ್ತು ಹೋಟೆಲ್‌ನ ಟೆಂಡರ್ ಪ್ರಕ್ರಿಯೆ ಮುಗಿಸಬೇಕು. ಅರ್ಹ ವರ್ತಕರಿಗೆ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಾಲೂಕು ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ಆಗ್ರಹಿಸಿದರು.

ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದ ಬಳಿ ತಾಲೂಕು ವರ್ತಕರ ಸಂಘದಿAದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಸೇರಿರುವ 8 ಅಂಗಡಿ ಮಳಿಗೆಯ ಜತೆ ಹೋಟೆಲ್ ಒಂದು ಖಾಲಿ ಇದೆ. ಕಳೆದ 11 ವರ್ಷಗಳಿಂದ ಬಸ್ ನಿಲ್ದಾಣದ ಮೇಲಿರುವ ಲಾಡ್ಜಗಳಿಗೆ ಇನ್ನೂ ಬಾಡಿಗೆಗೆ ಬಂದಿಲ್ಲ. ಈವರೆಗೆ ಪಪಂಗೆ ಸುಮಾರು 10 ಕೋಟಿ ರೂ.ನಷ್ಟ ಉಂಟಾಗಿದೆ. ಈ ಅವಾಂತರಗಳಿಗೆ ಇಲ್ಲಿನ ಅವೈಜ್ಞಾನಿಕ ದರ ನಿಗದಿ ಮತ್ತು ಅಽಕಾರಿಗಳ ಬೇಜವಾಬ್ದಾರಿಯೇ ಕಾರಣ. ಈ ಕೂಡಲೆ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದರು.
ಹಿರಿಯ ವರ್ತಕ ಕನಕರಾಜ್, ಕಾರ್ಯದರ್ಶಿ ಕೆ.ಆರ್.ಹರೀಶ್, ಉಪ ಕಾರ್ಯದರ್ಶಿ ವಾದಿರಾಜ್ ಭಟ್, ಉಪಾಧ್ಯಕ್ಷ ಸುದೇಶ್‌ಕಾಮತ್, ಶಿವಕುಮಾರ್, ಖಜಾಂಚಿ ದೀಪಕ್ ಸ್ವರೂಪ್, ವಿಠಲ್‌ರಾವ್, ನಿಂಗಮೂರ್ತಿ, ಪೂರ್ಣೇಶ್ ಮಲೇಬೈಲು, ಬಿ.ಎಸ್.ಸುರೇಶ, ವಿನಾಯಕ ಹೆದ್ಲಿ, ಪ್ರವೀಣ, ಭೋಜಪ್ಪಗೌಡ, ಪ್ರಶಾಂತ್, ವಿನಯಕುಮಾರ್, ಗುರುರಾಜ್, ಗೌತಮ್, ವಿಜಯಕುಮಾರ್, ಸುಽÃಂದ್ರ ಪಂಡಿತ್, ಮನೋಹರ, ರಾಘವೇಂದ್ರ ಗಣೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net