ಜಪಾನೀಸ್ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

BCU
Published on

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷಾ ಕಲಿಕಾ ವಿಭಾಗವು 2024-25ನೇ ಸಾಲಿನ ಜಪಾನೀಸ್ ಭಾಷಾ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ.

ಕೋರ್ಸ್ ಅನ್ನು ಕೌಶಲಾಧಾರಿತ ವೃತ್ತಿಪರರಿಗಾಗಿ ರೂಪಿಸಲಾಗಿದೆ. ಈ ಕೋರ್ಸಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾನ್ಯತೆ ದೊರೆತಿದೆ.

ವೃತ್ತಿಪರ ಪದವಿಗಳು ಅಥವಾ ಡಿಪ್ಲೊಮಾಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ, ಇಂಟರ್ನ್‌ಶಿಪ್ ಅವಕಾಶ ಮತ್ತು ಉದ್ಯೋಗದ ಸಹಾಯವನ್ನು ವಿಶ್ವವಿದ್ಯಾನಿಲಯ ಒದಗಿಸುತ್ತದೆ.

ಆಸಕ್ತ ಅಭ್ಯರ್ಥಿಗಳು 2025ರ ಜನವರಿ 10ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಪ್ರವೇಶ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ

ವೆಬ್‌ಸೈಟ್ www.bcu.ac.in ಗೆ ಭೇಟಿ ನೀಡಬಹುದು ಎಂದು ಕುಲಪತಿ ಪ್ರೊ. ಲಿಂಗರಾಜ ಗಾಂಧಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net