ಕಾಲ್ ಸೆಂಟರ್ ಉದ್ಯೋಗಿ ನಾಪತ್ತೆ

Published on

ಸಿದ್ದಾಪುರ: ಬೆಂಗಳೂರಿನ ಕಾಲ್ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದು ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಒಂದನೇ ವಾರ್ಡ್ ನಿವಾಸಿ, ವಿವಾಹಿತ ಮಹಿಳೆ ಸೌಮ್ಯಾ (36) ಕಾಣೆಯಾದವರು.

ಕಳೆದ ಮೂರು ತಿಂಗಳಿಂದ ಬೆಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸೌಮ್ಯಾ ಡಿ.24ರಂದು ಮನೆಗೆ ಬಂದಿದ್ದು ಅದೇ ದಿನ ಮರಳಿ ಬೆಂಗಳೂರಿಗೆ ಕೆಲಸಕ್ಕೆ ಹೋಗಿ 15 ದಿನ ಕೆಲಸ ನಿರ್ವಹಿಸಿ ಸಂಬಳ ಪಡೆದು ಬರುವುದಾಗಿ ಪತಿಗೆ ತಿಳಿಸಿದ್ದು ತನ್ನ ಗೆಳತಿಯೊಂದಿಗೆ ತಂಗುವುದಾಗಿ ಹೇಳಿ ತೆರಳಿರುತ್ತಾರೆ.

ಧರ್ಮಸ್ಥಳ ಸಂಘ ಹಾಗೂ ಇತರ ಸಂಘದಲ್ಲಿ ಸಾಕಷ್ಟು ಸಾಲ ಇದ್ದು ಕುಟುಂಬ ನಿರ್ವಹಣೆಗೆ ಕಷ್ಟ ಇದ್ದುದ್ದರಿಂದ ಸಾಲಗಾರರ ಹಾವಳಿಯಿಂದ ಪತ್ನಿ ಮನೆ ಬಿಟ್ಟು ಹೋಗಿರುವುದಾಗಿ ಪತಿ ದೂರಿನಲ್ಲಿ ತಿಳಿಸಿದ್ದು, ಸಿದ್ದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net