

ಪಡುಬಿದ್ರಿ: ಹೈನುಗಾರಿಕೆ ಮಾಡುತ್ತಿರುವ ಕೋಟೆ ಗ್ರಾಮದ ಗೌರೀಶ್ ಎಂಬುವರ ದನದ ಕರುವನ್ನು ಶರೀಫ್ ಹಾಗೂ ಅಶ್ಪಕ್ ಎಂಬುವರು ಕಳವು ಮಾಡಿ ಮಾಂಸ ಮಾಡಿ ಮಾರಾಟ ಮಾಡಿರುವ ಪ್ರಕರಣ ಕಾಪು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೇ.29ರಂದು ಕರು ನಾಪತ್ತೆಯಾಗಿದ್ದು, ಕರುವನ್ನು ಪತ್ತೆ ಮಾಡಿ ಹಿಂದಿರುಗಿಸುವಂತೆ ಕೋರಿ ಗೌರೀಶ್ ಕಾಪು ಪೊಲೀಸ್ ಠಾಣೆಯಲ್ಲಿ ಗುರುವಾರ ಅರ್ಜಿ ನೀಡಿದ್ದರು. ಅವರ ಮಾವ ಚಂದ್ರಕಾಂತ್ ಅವರಲ್ಲಿ ವಿಚಾರಿಸಿದಾಗ ಶರೀಫ್ ಹಾಗೂ ಅಶ್ಪಕ್ ಕರುವನ್ನು ಕಳವು ಮಾಡಿ ಎಳೆದುಕೊಂಡು ಹೋಗುತ್ತಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.