ಕಾಡುಪ್ರಾಣಿ ದಾಳಿಗೆ ಕರು ಬಲಿ

Published on

ಸುಂಟಿಕೊಪ್ಪ: ಮಳ್ಳೂರಲ್ಲಿ ಹುಲಿ ಅಥವಾ ಚಿರತೆ ದಾಳಿಗೆ ಸಿಲುಕಿ 4 ತಿಂಗಳ ಕರುವೊಂದು ಬಲಿಯಾಗಿದೆ.

ಸೋಮವಾರ ಬೆಳಗ್ಗೆ ಮಳ್ಳೂರಿನ ನಿವಾಸಿ ತೇಜಕುಮಾರ್ ಎಂಬುವರಿಗೆ ಸೇರಿದ 4 ತಿಂಗಳ ಕರುವನ್ನು ಮೇಯಲು ಹಾರಂಗಿ ಹಿನ್ನೀರಿ ಕಾಫಿ ಕಣದ ಪಕ್ಕದಲ್ಲಿ ಕಟ್ಟಿ ಹಾಕಲಾಗಿತ್ತು. ವನ್ಯ ಪ್ರಾಣಿಯ ದಾಳಿಗೆ ಸಿಲುಕಿದ್ದು ವಿಷಯ ತಿಳಿಸಿದ ಮೇರೆಗೆ ತೇಜಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಕರುವಿನ ಅರ್ಧ ದೇಹವನ್ನು ಚಿರತೆ ಅಥವಾ ಹುಲಿ ದಾಳಿ ನಡೆಸಿ ತಿಂದು ಹಾಕಿರುವುದು ಗೋಚರಿಸಿದೆ.

ಕೂಡಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದ ಆನೆಕಾಡು ಅರಣ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net