

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕರುವನ್ನು ಕೊಂದು ಹಾಕಿದೆ.
ಶುಕ್ರವಾರ ನಸುಕಿನಲ್ಲಿ ಗ್ರಾಮದ ಪಿಣ್ಣಪ್ಪನ ಮಹದೇವಪ್ಪ ಎಂಬುವರ ಜಮೀನಿಗೆ ಬಂದ ಚಿರತೆ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಮೇಲೆ ದಾಳಿ ಮಾಡಿದೆ. ಹಸುಗಳ ಅರಚಾಟದ ಶಬ್ದದಿಂದ ಎಚ್ಚೆತ್ತ ಮನೆಯವರು ಹೊರಗೆ ಬರುತ್ತಿದ್ದಂತೆ ಕರುವನ್ನು ಬಿಟ್ಟು ಪರಾರಿಯಾಗಿದೆ.
ವಿಷಯ ತಿಳಿದ ಬಫರ್ ವಲಯದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಶೀಘ್ರವೇ ಪರಿಹಾರ ಕೊಡಿಸುವ ಭರವಸೆ ನೀಡಿದರು. ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.