

ಅರಕಲಗೂಡು: ತಾಲೂಕಿನ ಶಾನುಬೋಗನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿದೆ.
ಗ್ರಾಮದ ರಾಜಣ್ಣ ತಮ್ಮ ಮನೆಯ ಮುಂದೆ ಕಟ್ಟಿದ್ದ ಕರುವನ್ನು ರಾತ್ರಿ ಚಿರತೆ ಹೊತ್ತೊಯ್ದು ಪಕ್ಕದ ಜೋಳದ ಹೊಲದಲ್ಲಿ ಕೊಂದು ತಿಂದಿದೆ. ಗ್ರಾಮದ ಸುತ್ತಮುತ್ತ ಕಳೆದ ಒಂದು ತಿಂಗಳಿನಿಂದ ಚಿರತೆ ಅಡ್ಡಾಡುತ್ತಿದ್ದು, ಕೆಲ ದಿನಗಳ ಹಿಂದೆ ನಾಯಿಯನ್ನು ಕೊಂದು ಹಾಕಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.