

ಕುಂದಗೋಳ: ಪಟ್ಟಣದಲ್ಲಿ ಅದರಗುಂಚಿ ಶಂಕರಗೌಡರ ಪ್ರತಿಷ್ಠಾನ ವತಿಯಿಂದ ಕಲ್ಯಾಣಪುರದ ಪುಣ್ಯ ವೈಭವದ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮಂಗಳವಾರ ನೂತನ 2025ನೇ ವರ್ಷದ ಕ್ಯಾಲೆಂಡರ್ ಅನ್ನು ಪ್ರತಿಷ್ಠಾನದ ಕೋಶಾಧ್ಯಕ್ಷ ಗೌಡಪ್ಪಗೌಡ ಪಾಟೀಲ ಹಾಗೂ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಬಿಡುಗಡೆ ಮಾಡಿದರು.
ಶಂಕರಗೌಡ ಪ್ರತಿಷ್ಠಾನದ ಕೋಶಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡ ಗೌಡಪ್ಪಗೌಡ ಪಾಟೀಲ ಮಾತನಾಡಿ, ಕ್ಷೇತ್ರದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ ತಾಲೂಕಿನ ಪ್ರತಿ ಗ್ರಾಮಗಳ ಮನೆ ಮನೆಗೆ ಅದರಗುಂಚಿ ಶಂಕರಗೌಡರ ಪ್ರತಿಷ್ಠಾನ ವತಿಯಿಂದ ಹೊರತಂದಿರುವ 2025ರ ನೂತನ ವರ್ಷದ ಕ್ಯಾಲೆಂಡರ್ ಅನ್ನು ತಲುಪಿಸಲಾಗುವುದು.
ಸಾನ್ನಿಧ್ಯ ವಹಿಸಿ ತ್ರಿವಿಧ ದಾಸೋಹಿ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಮಾತನಾಡಿ, ಒಳ್ಳೆಯ ಕಾರ್ಯ ಕಲಾಪಗಳನ್ನು ಕೈಗೊಳ್ಳಲು ದಿನದರ್ಶಕ ಕ್ಯಾಲೆಂಡರ್ ಬಿಡುಗಡೆಗೊಳಿಸಿರುವುದು ಒಳ್ಳೆಯ ಸಾಮಾಜಿಕ ಕಾರ್ಯವಾಗಿದೆ. ಶಂಕರಗೌಡರ ಪ್ರತಿಷ್ಠಾನದ ವತಿಯಿಂದ ಇನ್ನೂ ಅನೇಕ ಒಳ್ಳೆಯ ಕಾರ್ಯಗಳು ನಡೆಯಬೇಕು ಎಂದು ಆಶೀರ್ವದಿಸಿದರು.
ನಂತರ ಪ್ರತಿಷ್ಠಾನದ ಅಧ್ಯಕ್ಷ ವಿ.ಜಿ. ಪಾಟೀಲ, ಜಾನಪದ ಕಲಾವಿದ ಡಾ. ರಾಮು ಮುಲಗಿ ಅವರು ಜನಪದ ಪ್ರಸ್ತುತಪಡಿಸಿ ಮಾತನಾಡಿದರು. ನಾಗರಾಜ ದೇಶಪಾಂಡೆ, ಪರಶುರಾಮ ಕಲಾಲ, ಲಕ್ಷ್ಮಣ ಚುಲಕಿ, ಅಜ್ಜಪ್ಪ ಬಂಡಿವಾಡ, ಗಿರಿಜಮ್ಮ ಪಾಟೀಲ, ರೇಖಾ ಪಲ್ಲೇದ, ಎಸ್.ಎಸ್. ಪಾಟೀಲ, ವೀರಭದ್ರಪ್ಪ ತೋಟದ, ಬಸಲಿಂಗಪ್ಪ ಮರಬದ, ಪ್ರಭುಗೌಡ ನರಗುಂದ, ಎಂ.ಎಂ. ಮಕಾನದಾರ, ಆಸೀಫ್ ಹರಪನಹಳ್ಳಿ, ಪ್ರಮಾನಾಥ ಜೈನ, ಗಂಗಾಧರ ಕೋಳಿವಾಡ, ಇತರರಿದ್ದರು. ಶಿಕ್ಷಕರಾದ ಎಂ.ಕೆ. ಪಾಟೀಲ ಹಾಗೂ ಶಿಕ್ಷಕರಾದ ಎಸ್.ಸಿ. ಶ್ಯಾನವಾಡ ಕಾರ್ಯಕ್ರಮ ನಿರ್ವಹಿಸಿದರು.