

ಉಪ್ಪಿನಬೆಟಗೇರಿ: ನಮ್ಮ ಶಾಖೆಯು ಗ್ರಾಹಕರೊಂದಿಗೆ ಉತ್ತಮ ವ್ಯವಹಾರ ಮಾಡುತ್ತಿದ್ದು, ಹಲವು ಯೋಜನೆಗಳಡಿ ಸಾಲ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸ್ಥಳೀಯ ಕೆಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಎಸ್.ಕೆ. ಪಾಟೀಲ ಹೇಳಿದರು.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿರುವ ಕೆಸಿಸಿ ಬ್ಯಾಂಕ್ನಲ್ಲಿ ಬುಧವಾರ ಆಯೋಜಿಸಿದ್ದ 2025ನೇ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಲ ಪಡೆಯುವ ಗ್ರಾಹಕರು ಹಣವನ್ನು ಒಳ್ಳೆಯ ಕೆಲಸಕ್ಕೆ ವಿನಿಯೋಗಿಸಿ ಮರಳಿ ಸಮಯಕ್ಕೆ ಸರಿಯಾಗಿ ಪಡೆದ ಸಾಲ ಮರುಪಾವತಿ ಮಾಡಬೇಕು ಎಂದರು.
ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಕೃಷಿ ಸಾಲ, ಠೇವಣಿಗೆ ಒಳ್ಳೆಯ ಬಡ್ಡಿ ನೀಡಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಬ್ಯಾಂಕ್ಗೆ ಬರುವ ಗ್ರಾಹಕರ ಜೊತೆಗೆ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಸೌಜನ್ಯದಿಂದ ನಡೆದುಕೊಳ್ಳುವ ಮೂಲಕ ಒಳ್ಳೆಯ ಸೇವೆ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪಿಕೆಪಿಎಸ್ ಕಾರ್ಯದರ್ಶಿ ಕಲ್ಲಪ್ಪ ಕಿತ್ತೂರು, ಬ್ಯಾಂಕ್ ಸಿಬ್ಬಂದಿ ಬಸವರಾಜ ಯಾವಗಲ್, ಎಸ್.ಎಂ. ಗಳತಗಿ, ಜಿ.ಎಸ್. ಕಬ್ಬೂರ, ವಿಜಯ ಕರಿಗಾರ, ಗ್ರಾಮಸ್ಥರಾದ ಕಲ್ಲಪ್ಪ ಯಮೋಜಿ, ಚನ್ನಯ್ಯ ಸಾಲಿಮಠ, ವಿರೂಪಾಕ್ಷಯ್ಯ ಇಂಚಗೇರಿಮಠ, ಬಸವರಾಜ ಹಳಮನಿ, ಶಿವಪ್ರಭು ಈಸರಗೊಂಡ, ಚಂದ್ರಶೇಖರ ದೊಡಮನಿ, ಹುಸೇನಬೇಗ ಜೋರಮ್ಮನವರ, ಸಂತೋಷ ಯಲಿಗಾರ, ಮಹಮ್ಮದ್ ಸಲೀಂ ಖತೀಬ ಸೇರಿ ಹನುಮನಕೊಪ್ಪ ಹಾಗೂ ಉಪ್ಪಿನಬೆಟಗೇರಿ ಗ್ರಾಮದ ಗ್ರಾಹಕರು ಉಪಸ್ಥಿತರಿದ್ದರು.