

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಕಾಹೆರ ಡಿಮ್ಡ್ ವಿಶ್ವವಿದ್ಯಾಲಯವು ಸಮುದಾಯ ಸೇವೆ, ಸಾಮಾಜಿಕ ಕಲ್ಯಾಣ ಕ್ಷೇತ್ರಕ್ಕೆ ನೀಡಿದ ಅತ್ಯುತಮ ಕೊಡುಗೆಗಳಿಗಾಗಿ ಐದು ಪ್ರತಿಷ್ಠಿತ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್ ) ಅತ್ಯುತ್ತಮ ವಿಶ್ವವಿದ್ಯಾಲಯ, ಅತ್ಯುತ್ತಮ ಕಾರ್ಯಕ್ರಮ ಸಂಯೋಜನಾಕಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಬೆಂಗಳೂರಿನ ರಾಜಭವನದಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2022-23ನೇ ಸಾಲಿನ ಸಮುದಾಯ ಸೇವೆಗಾಗಿ ಎನ್‌ಎಸ್‌ಎಸ್ ಪ್ರಶಸ್ತಿಗಳನ್ನು ಕಾಹೆರ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಪ್ರದಾನ ಮಾಡಿ ಗೌರವಿಸಿದರು. ಕಾಹೆರ ರಜಿಸ್ಟ್ರಾರ್ ಡಾ.ಎಂ.ಎಸ್. ಗಣಾಚಾರಿ ಪ್ರಶಸ್ತಿ ಸ್ವೀಕರಿಸಿದರು.
ಎಂಎಲ್ಸಿ ಗೋವಿಂದ ರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಕಾರ್ಯದರ್ಶಿ ರಣದೀಪ್.ಡಿ.,ಆಯುಕ್ತ ಚೇತನ್ ಆರ್., ಎನ್‌ಎಸ್‌ಎಸ್ ಅಕಾರಿ ಡಾ. ಪ್ರತಾಪ ಲಿಂಗಯ್ಯ, ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಡಿ. ಕಾರ್ತಿಗೆಯೇನ್, ಅಕಾರಿ ಸಂತೋಷಕುಮಾರ ಇತರರಿದ್ದರು.
ಡಾ.ಕೋರೆ ಅಭಿನಂದನೆ: ಉತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮ ಮಾಡುವಲ್ಲಿ ಡಾ.ಅಶ್ವಿನಿ ನರಸಣ್ಣವರ, ಉತ್ತಮ ಆರೋಗ್ಯ ತಪಾಸಣೆ ಶಿಬಿರ, ವಾರ್ಷಿಕ ಶಿಬಿರ, ಜಾಗೃತಿ ಕಾರ್ಯಕ್ರಮ ಸೇರಿ ವಿವಿಧ ಎನ್‌ಎಸ್‌ಎಸ್ ಚಟುವಟಿಕೆ ಆಯೋಜಿಸಿ ಅತ್ಯುತ್ತಮ ಕೊಡುಗೆ ನೀಡಿರುವ ಕೆಎಲ್‌ಇ ನರ್ಸಿಂಗ್ ವಿಜ್ಞಾನ ಸಂಸ್ಥೆ ಪ್ರಾಂಶುಪಾಲ ಡಾ.ವೀರೇಶಕುಮಾರ ನಂದಗಾಂವ್, ಸಮುದಾಯ ಆಧಾರಿತ ಚಟುವಟಿಕೆ, ಆರೋಗ್ಯ ತಪಾಸಣೆ ಶಿಬಿರ, ಜಾಗೃತಿ ಕಾರ್ಯಕ್ರಮ ಇತ್ಯಾದಿ ಅತ್ಯುತ್ತಮ ಕೊಡುಗೆಗೆ ಡಾ.ನಮ್ರತಾ ಎಂ. ದೇವಲ್ಕರ್, ನಿಯಮಿತ ಮತ್ತು ವಾರ್ಷಿಕ ಎನ್‌ಎಸ್‌ಎಸ್ ಶಿಬಿರಗಳ ಸಂದರ್ಭದಲ್ಲಿ ಸಮುದಾಯ ಸಂಪರ್ಕ, ಆರೋಗ್ಯ ಮತ್ತು ಶಿಕ್ಷಣ ಚಟುವಟಿಕೆ ಇತ್ಯಾದಿಗಳಲ್ಲಿ ಭಾಗವಹಿಸಿದ್ದಕ್ಕಾಗಿ ಸೂರ್ತಿ ಕೊಂಕಣಿ ಅವರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿನಂದನೆ ಸಲ್ಲಿಸಿದ್ದಾರೆ.