

ನ್ಯಾಮತಿ: ತಾಲೂಕಿನ ಗಡಿಯಂಚಿನ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಈಚೆಗೆ ಚಿರತೆಯೊಂದು ಮಹಿಳೆಯನ್ನು ಕೊಂದು ಹಾಕಿದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಶುಕ್ರವಾರ ಚಿರತೆ ಸೆರೆಗೆ ಫಲವನಹಳ್ಳಿಯ ಬಳಿ ಬೋನು ಅಳವಡಿಸಿದರು.
ಈ ಕುರಿತು ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೇತನ್ ಕೆ.ಆರ್. ಮಾಹಿತಿ ನೀಡಿ, ಚಿರತೆ ಸೆರೆಗೆ ಈಗಾಗಲೇ ಬೋನು ಅಳವಡಿಸಿದ್ದು, ಯಾರು ಆತಂಕಪಡಬೇಕಿಲ್ಲ. ಆದರೆ, ಚಿರತೆ ಸೆರೆಯಾಗುವವರೆಗೆ ಫಲವನಹಳ್ಳಿ, ಚಟ್ನಹಳ್ಳಿ, ಸೋಗಿಲು, ಸಾಲಬಾಳು, ದಾಸರಹಟ್ಟಿ, ಯರಮುಡ ಸುತ್ತಮುತ್ತಲಿನ ಗ್ರಾಮದ ಜನರು ಹೊಲ, ಗದ್ದೆ, ತೋಟಗಳಿಗೆ ಒಂಟಿಯಾಗಿ ಓಡಾಡಬಾರದು. ಸಂಜೆ ಒಳಗಾಗಿ ಕೃಷಿಕರು ಮನೆಗೆ ತೆರಳುವಂತೆ ಸಲಹೆ ನೀಡಿದರು.