ಸಿಎಜಿ ವರದಿಯಲ್ಲಿ ಹಗರಣಗಳ ಉಲ್ಲೇಖವಿದೆ

9 Dwd 2 (Santosh Lad)
Published on

ಹುಬ್ಬಳ್ಳಿ: ನಿಯಂತ್ರಕರು ಹಾಗೂ ಮಹಾಲೇಖಪಾಲರ ವರದಿ (ಸಿಎಜಿ)ಯಲ್ಲಿ ಕೇಂದ್ರ ಸರ್ಕಾರದ 6 ಹಗರಣಗಳ ಬಗ್ಗೆ ಉಲ್ಲೇಖವಿದೆ. ಬಿಜೆಪಿಯವರ ಕರ್ಮಕಾಂಡ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದ 9 ವರ್ಷಗಳಲ್ಲಿ ಸಂಸತ್​ನಲ್ಲಿ ಲೋಕಪಾಲ್ ಬಿಲ್ ಬಗ್ಗೆ ರ್ಚಚಿಸಿಲ್ಲ. ಅಂಬಾನಿ ಕಂಪನಿ ಒಂದೂ ಸೈಕಲ್ ಕೂಡ ತಯಾರಿಸಿಲ್ಲ. ಅವರಿಗೆ ಹೆಲಿಕಾಪ್ಟರ್ ರೆಡಿ ಮಾಡಲು ಹೇಳುತ್ತಾರೆ. ಇದು ಯಾವ ಧರ್ಮ? ಅನುಭವ ಇಲ್ಲದ ಅವರಿಗೆ ಮತ್ತು ಫ್ರಾನ್ಸ್ ಕಂಪನಿಗೆ ನೇರವಾಗಿ ಗುತ್ತಿಗೆ ನೀಡುತ್ತೀರಿ ಅಂದರೆ ಇದೂ ಭ್ರಷ್ಟಾಚಾರ ಅಲ್ಲವೇ? ಕೋವಿಡ್ ವೇಳೆ 30 ಸಾವಿರ ಕೋಟಿ ರೂ. ಪ್ರತ್ಯೇಕ ಟ್ರಸ್ಟ್ ಮಾಡಿ ತೆಗೆದುಕೊಳ್ಳಲಾಗಿದೆ. ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಹಣವನ್ನಉ ನೇರವಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ತಗೋಬಹುದಿತ್ತಲ್ಲ ಎಂದರು.

ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಮೂರು ತಿಂಗಳಾಗಿಲ್ಲ. ಹೆಸರು ಕೆಡಿಸಬೇಕೆಂದು ಪುರಾವೆಗಳಿಲ್ಲದೇ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಕೇಳಿದರೆ ಬಿಜೆಪಿಯವರು ಉತ್ತರ ಕೊಡುವುದಿಲ್ಲ. ಮೋದಿ ಅವರು ಬರೀ ಪ್ರಚಾರದ ಬೆನ್ನು ಬಿದ್ದಿದ್ದಾರೆ. ಅಷ್ಟು ಪ್ರಚಾರ ಪಡೆಯುವವರು ಮಹಾನ್ ವ್ಯಕ್ತಿಯಂತೆ ಕಂಡೇ ಕಾಣುತ್ತಾರೆ ಎಂದು ಕುಟುಕಿದರು.

ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ತೆಗೆದರು. ಈಗ ಏನಾಯ್ತು? ಎಲ್ಲದಕ್ಕೂ ಒಂದು ಕಾಲ ಇರುತ್ತದೆ. ಪ್ರಧಾನಿ ಮೋದಿ ತಪ್ಪು ಮಾತನಾಡಿದರೆ ತಲೆದೂಗುವುದು, ರಾಹುಲ್ ಗಾಂಧಿ ಮಾತನಾಡಿದರೆ ಪಪ್ಪು ಎನ್ನುವುದು. ಬುದ್ಧಿವಂತ ಪ್ರಧಾನಿ ಆಗಿದ್ದರೆ ಒಂದು ಗಂಟೆ ಮುಂದೆ ಬಂದು ಮಾಧ್ಯಮದವರ ಮುಂದೆ ಮಾತನಾಡಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net