ಕಾಡಾ ಕಟ್ಟಡಕ್ಕಾಗಿ ಬಾದರ್ಲಿಗಳ ಗುದ್ದಾಟ !

5SND-01
Published on

ಸಿಂಧನೂರು: ನಗರದ ಕಾಡಾ ಕಚೇರಿಯಲ್ಲಿ ಕಚೇರಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಎಂಎಲ್ಸಿ ಬಸನಗೌಡ ಬಾದರ್ಲಿ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಕಚೇರಿಗೆ ಎರಡು ಕೀಲಿ ಹಾಕಿರುವುದು ರಾಜಕೀಯ ವಲಯದಲ್ಲಿ ತೀರ್ವ ಚರ್ಚೆಗೆ ಗ್ರಾಸವಾಗಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಕಚೇರಿಯಲ್ಲಿ ಈ ಹಿಂದಿನ ಶಾಸಕ ವೆಂಕಟರಾವ ನಾಡಗೌಡ ಶಾಸಕರ ಕಚೇರಿ ಆರಂಭಿಸಿದ್ದರು. ಹಂಪನಗೌಡ ಬಾದರ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಶಾಸಕರ ಕಚೇರಿ ಆರಂಭಿಸಿರಲಿಲ್ಲ. ನೂತನ ಎಂಎಲ್‌ಸಿ ಬಸನಗೌಡ ಬಾದರ್ಲಿ ಕಾಡಾ ಮುನಿರಾಬಾದ್ ಆಡಳಿತಾಧಿಕಾರಿಯಿಂದ ಪರಿಷತ್ ಸದಸ್ಯರ ಕಚೇರಿ ತೆರೆಯಲು ಅನುಮೋದನೆ ಪಡೆದುಕೊಂಡಿದ್ದು, ಅದರಂತೆ ಇಲಾಖೆ ಎಇಇ ಕಚೇರಿ ಆರಂಭಿಸಲು ಕ್ರಮಕೈಗೊಂಡು ಬಸನಗೌಡಗೆ ಕಚೇರಿ ಹಸ್ತಾಂತರ ಮಾಡಿದ್ದರು.

ಈಗ ಶಾಸಕ ಹಂಪನಗೌಡ ಬಾದರ್ಲಿ ಕೂಡ ಶಾಸಕರ ಕಚೇರಿಗೆ ಕಾಡಾ ಕಚೇರಿ ನೀಡುವಂತೆ ಜಿಲ್ಲಾಧಿಕಾರಿ ಮುಖಾಂತರ ಕಾಡಾ ಮುನಿರಾಬಾದ್ ಆಡಳಿತಾಧಿಕಾರಿಗೆ ಸೂಚನೆ ಕೊಡಿಸಿದ್ದಾರೆ. ಇದರಿಂದಾಗಿ ಒಂದೇ ಕಚೇರಿಗೆ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತ್ಯೇಕ ಕೀಲಿ ಹಾಕಿಸಿದ್ದಾರೆ.
ಸ್ಥಳೀಯ ಕಾಡಾ ಅಧಿಕಾರಿ ಮೇಲಧಿಕಾರಿ ಸೂಚನೆಯನ್ವಯ ಕಟ್ಟಡ ಹಸ್ತಾಂತರ ಆದೇಶ ಹಿಂಪಡೆದಿದ್ದು, ಕಚೇರಿಯನ್ನು ಯಾರಿಗೂ ನೀಡದೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net