ಮಹಿಳೆ ಪರ್ಸ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಕಳ್ಳಿ ಬಂಧನ

cactus arrest for gold jewelery theft
ದೊಡ್ಡಪೇಟೆ ಠಾಣೆ ಪೊಲೀಸರು ಕಳ್ಳಿಯಿಂದ ವಶಕ್ಕೆ ಪಡೆದು ಚಿನ್ನಾಭರಣ.
Published on

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಹೊರ ರೋಗಿಗಳ ರಶೀದಿ ನೀಡುವ ಸ್ಥಳದಲ್ಲಿ ಬಿಲ್ ಪಾವತಿಸಲು ಸರದಿಯಲ್ಲಿ ನಿಂತಿದ್ದ ಮಹಿಳೆಯ ಪರ್ಸ್‌ನಲ್ಲಿದ್ದ ಚಿನ್ನಾಭರಣವಿದ್ದ ಬಾಕ್ಸ್ ಕಳವು ಮಾಡಿದ್ದ ಕಳ್ಳಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ನಾಲ್ಕೇ ದಿನದಲ್ಲಿ ಬಂಧಿಸಿದ್ದು 1.28 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಟಿಪ್ಪುನಗರದ ಗೌಸಿಯಾ ಸರ್ಕಲ್ ಹತ್ತಿರದ ನಿವಾಸಿ ತಾಹಿರಾ ರೋಹಿ(30) ಬಂಧಿತ ಕಳ್ಳಿ. ಜು.19ರಂದು ಮಧ್ಯಾಹ್ನ 27 ವರ್ಷದ ಮಹಿಳೆ ಮೆಗ್ಗಾನ್ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ರಶೀದಿ ನೀಡುವ ಸ್ಥಳದಲ್ಲಿ ಸರದಿಯಲ್ಲಿ ನಿಂತು ಬಿಲ್ ಪಾವತಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 32 ಗ್ರಾಂ ಚಿನ್ನಾಭರಣದ ಬಾಕ್ಸ್ ಅನ್ನು ಕಳ್ಳಿ ಎಗರಿಸಿದ್ದಳು.
ಡಿವೈಎಸ್ಪಿ ಬಾಲರಾಜ್ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ಅಂಜನ್‌ಕುಮಾರ್ ನೇತೃತ್ವದಲ್ಲಿ ಪ್ರೊಬೇಷನರಿ ಡಿವೈಎಸ್ಪಿ ಮಂಜುನಾಥ್, ಪಿಎಸ್‌ಐಗಳಾದ ವಸಂತ್, ಉಮಾ ಪಾಟೀಲ್, ಎಎಸ್‌ಥ ಚಂದ್ರಶೇಖರ್, ಸಿಬ್ಬಂದಿಗಳಾದ ಪಾಲಾಕ್ಷನಾಯ್ಕ, ಲಚ್ಚಾನಾಯ್ಕಾ, ಚಂದ್ರನಾಯ್ಕ, ಶಶಿಧರ್, ತ್ರಿವೇಣಿ ಅವರನ್ನು ಒಳಗೊಂಡ ತಂಡ ಕಳ್ಳಿಯನ್ನು ಪತ್ತೆ ಮಾಡಿ ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net