ಕೇಬಲ್​ ಕಳವು ಆರೋಪಿ ಬಂಧನ

Published on

ಮುಳಬಾಗಿಲು: ತಾಲೂಕಿನ ವಿವಿಧೆಡೆ ರೈತರ ಕೊಳವೆ ಬಾವಿಗಳ ಪಂಪ್​ಸೆಟ್​ಗಳಿಗೆ ಅಳವಡಿಸಿದ್ದ ಕೇಬಲ್​ ವೈಯರ್​ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ನಂಗಲಿ ಪೊಲೀಸರು ಬಂಧಿಸಿ, ನ್ಯಾಯಾಂಗ ಆಂಧ್ರಪ್ರದೇಶದ ಪುಂಗನೂರು ತಾಲೂಕಿನ ಕುರಪಲ್ಲಿ ಗ್ರಾಮದ ಎಸ್​.ಲೋಕೇಶ್​(31) ಬಂದಿತ. ತಾಲೂಕಿನ ಪದ್ಮಟ್ಟ, ಎನ್​. ವಡ್ಡಹಳ್ಳಿ, ಎಚ್​.ಕೊತ್ತೂರು ಮತ್ತೀತರೆ ಗ್ರಾಮಗಳಲ್ಲಿ ರೈತರ ಪಂಪ್​ ಸೆಟ್​ಗೆ ಅಳವಡಿಸಿದ್ದ ಕೇಬಲ್​ಗಳನ್ನು ಕಳವು ಮಾಡಲಾಗಿತ್ತು. ಪದ್ಮಟ್ಟ ಗ್ರಾಮದ ರೈತ ವಿ.ನಾಗೇಂದ್ರ ಬಾಬು ಅವರು ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಭಾರ ಪಿಎಸ್​ಐ ಎಲ್​.ಮಮತಾ ಮತ್ತು ಪೊಲೀಸ್​ ಸಿಬ್ಬಂದಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದಾಗ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net