ಗ್ರೀನ್ ಸಿಗ್ನಲ್ ಬಂದಿಲ್ಲ, ಸಚಿವ ಆರ್.ಅಶೋಕ್ ಶಾಕಿಂಗ್ ಹೇಳಿಕೆ

R Ashok
Published on

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ತನಕ ವರಿಷ್ಠರಿಂದ ಒಪ್ಪಿಗೆ ಸಿಕ್ಕಿಲ್ಲ. ಅಧಿವೇಶನಕ್ಕೆ ಮುನ್ನ ವಿಸ್ತರಣೆ ಅಸಂಭವ ಎಂದು ಸಚಿವ ಆರ್.ಅಶೋಕ್ ಹೇಳುವ ಮೂಲಕ ಆಕಾಂಕ್ಷಿಗಳನ್ನು ನಿರಾಸೆಯ ಮಡುವಿಗೆ ತಳ್ಳಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸಿಎಂ ಭೇಟಿ ವೇಳೆ ಈ ವಿಷಯ ಚರ್ಚೆಗೆ‌ ಬರುವ ಸಾಧ್ಯತೆಯಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಎಸ್ ವೈ ಭೇಟಿ ವೇಳೆ‌ ಚರ್ಚಿಸಿ ಪಟ್ಟಿ ಸಲ್ಲಿಸಿದ್ದು, ಇನ್ನೇನಿದ್ದರೂ ಅಲ್ಲಿಂದಲೇ ಸೂಚನೆ ಬರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net