ಯಡಿಯೂರಪ್ಪಾಜಿ ಎಂದಿಗೂ ಮಾತಿಗೆ ತಪ್ಪಿಲ್ಲ, ಗೆದ್ದು ಶಾಸಕರಾದವರಿಗೆ ಅನ್ಯಾಯ ಮಾಡೋದಿಲ್ಲ: ಶಶಿಕಲಾ ಜೊಲ್ಲೆ

Shashikala Jolle 2 Feb 2
Published on

ಬಾಗಲಕೋಟೆ: ಸಂಪುಟ ವಿಸ್ತರಣೆ ವೇಳೆ ನನಗೆ ಅನ್ಯಾಯ ಆಗುವುದಿಲ್ಲ ಎಂಬ ವಿಶ್ವಾಸ ಇದೆ. ಯಾಕೆಂದರೆ ನಾನು ಪಕ್ಷದ ಸಂಘಟನೆ ಮತ್ತು ಸಮಾಜಸೇವೆಯಿಂದ ಗುರುತಿಸಿಕೊಂಡಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಒಮ್ಮೆ ಏನಾದರೂ ಹೈಕಮಾಂಡ್​ನಿಂದ ಆದೇಶ ಬಂದರೆ ಅದಕ್ಕೆ ಬದ್ಧನಾಗಿರುತ್ತೇನೆ. ಇರುವ ಶಾಸಕಿ ಸ್ಥಾನವನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಯಾರನ್ನೂ ಕೈಬಿಡೋದಿಲ್ಲ ಎಂದು ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದಾಗ ಹೇಳಿದ್ದಾರೆ. ಪಕ್ಷಕ್ಕೆ ಬಂದು ಶಾಸಕರಾಗಿರುವ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುತ್ತೇವೆ, ಹಾಗೇ ಯಾರನ್ನೂ ಕೈ ಬಿಡೋದಿಲ್ಲ ಎಂದು ಹೇಳಿದ್ದಾರೆ. ಹೈಕಮಾಂಡ್​ ಕೂಡ ಅದೇ ನಿರ್ಧಾರ ಮಾಡಿರಬಹುದು ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಕಳೆದ ಮೈತ್ರಿ ಸರ್ಕಾರ ಬಿಟ್ಟು ಬಂದು ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾದವರಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚರ್ಚೆ ನಡೆಯುತ್ತಿದೆ. ಅವರ ತ್ಯಾಗದಿಂದಲೇ ಸರ್ಕಾರ ರಚನೆಯಾಗಿದೆ ಎಂಬುದನ್ನು ಮರೆಯಲಾಗದು. ಯಡಿಯೂರಪ್ಪಾಜಿ ಮಾತಿಗೆ ತಪ್ಪಿದವರಲ್ಲ. ಗೆದ್ದು ಶಾಸಕರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net