ಬೆಲೆಯಿಲ್ಲದೆ ಕೋಸು ಬೆಳೆ ಹಾನಿ

kolar
Published on

ಬೂದಿಕೋಟೆ: ಲಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದಿರುವ ಎಲೆ ಕೋಸು ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದ ಕಾರಣ, ರೈತರು ತೋಟಗಳಿಗೆ ರಾಸುಗಳನ್ನು ಬಿಟ್ಟು ಸೋಮವಾರ ಮೇಯಿಸಿದರು.

ಬೂದಿಕೋಟೆ ಗ್ರಾಮದ ರೈತ ಚಂದ್ರಶೇಖರ್​ 3 ಎಕರೆಯಲ್ಲಿ ಎಲೆಕೋಸು ಬೆಳೆದಿದ್ದರು. ಆದರೆ ಕೋಸಿಗೆ ನಿಗದಿತ ಬೆಲೆ ಇಲ್ಲದೆ ಇರುವುದರಿಂದ ಬೇಸತ್ತು ದನ, ಕರುಗಳನ್ನು ಬಿಟ್ಟು ಬೆಳೆಯನ್ನು ನಾಶ ಪಡಿಸಿದ್ದು, ಸಂಕಷ್ಟಕ್ಕೆ ಇಡಾಗಿದ್ದಾರೆ.

ಈ ಹಿಂದೆ 10ಟನ್​ ಎಲೆಕೋಸಿಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಬೆಲೆ ಇತ್ತು, ಇತ್ತೀಚಿಗೆ ಬೆಲೆ ಇಲ್ಲದೆ ಇರುವುದರಿಂದ 10ಟನ್​ ಎಲೆಕೋಸಿಗೆ ಕೇವಲ 6&7 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಕೋಸು ಬೆಳೆದಿರುವ ರೈತರು ಕಂಗಾಲಾಗಿದ್ದಾರೆ.

ಬಹುತೇಕ ರೈತರು ಎಲೆಕೋಸಿಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೋಸು ಬೆಳೆ ಮಾಡಿದ್ದು, ಇದೀಗ ರೈತರು ಬೆಲೆಯಿಲ್ಲದೆ ಕೈಸುಟ್ಟುಕೊಳ್ಳುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ.

ರಸ ಗೊಬ್ಬರಗಳು ಹಾಗೂ ಬೆಲೆಗಳಿಗೆ ಬೇಕಾಗಿರುವ ಔಷಧಗಳ ಬೆಲೆ ಏರಿಕೆ ನಡುವೆಯೂ ಉತ್ತಮ ಬೆಳೆ ತೆಗೆಯಲಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀೆಯಿತ್ತು. ಆದರೆ ಬೇಡಿಕೆಯಿಲ್ಲದೆ ಬೆಲೆ ಕುಸಿದಿದ್ದು, ಹಾಕಿದ ಬಂಡವಾಳ ಮಾಡಿಕೊಳ್ಳುವುದು ಕಷ್ಟವಾಗಿದೆ ಎಂದು ರೈತ ಚಂದ್ರಶೇಖರ್​ ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net