ಕ್ಯಾಬ್ ಚಾಲಕನ ಮೇಲೆ ಹಲ್ಲೆ

Published on

ಮೈಸೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆಟೋ ಚಾಲಕನೊಬ್ಬ, ಕ್ಯಾಬ್ ಚಾಲಕ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಮಾಡಿರುವುದಾಗಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶನಗರದ ಪುರುಷೋತ್ತಮ, ಆತನ ಪತ್ನಿ ಸುನೀತಾ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಟೋ ಚಾಲಕ ವಿಜಯ್‌ಕುಮಾರ್ ಅಲಿಯಾಸ್ ವಿಜಿ, ಪತ್ನಿ ನನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಬೇರೊಬ್ಬನೊಂದಿಗೆ ಓಡಿ ಹೋಗಿರುತ್ತಾಳೆ. ಇದಕ್ಕೆ ನಾನೇ ಕಾರಣ ಎಂದು ದ್ವೇಷ ಇಟ್ಟುಕೊಂಡಿದ್ದ ವಿಜಯ್‌ಕುಮಾರ್, ಆ.4ರಂದು ಸಂಜೆ ಸಯ್ಯಜಿರಾವ್ ರಸ್ತೆಯ ಹೋಟೆಲ್ ಮುಂದೆ ಬಾಡಿಗೆಗಾಗಿ ಬಂದಿದ್ದ ನನ್ನ ಮೇಲೆ ಇಲ್ಲಿ ಯಾರು ಕ್ಯಾಬ್ ನಿಲ್ಲಿಸಿದ್ದೀಯಾ ಎಂದು ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾರೆ. ಅಲ್ಲದೆ ನಾಲ್ಕೈದು ಜನ ಸೇರಿಕೊಂಡು ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ನನ್ನ ಪತ್ನಿ ಸುನೀತಾ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net