ಸಿಎಎ ಬೆಂಬಲಿಸಿ ಕಂಪ್ಲಿಯಲ್ಲಿ ಬಿಜೆಪಿಯಿಂದ ಸಹಿ ಸಂಗ್ರಹ ಅಭಿಯಾನ

130120 Kampli CAA Support Signature Campaign
Published on

ಕಂಪ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ನಿರ್ಭೀತಿಯಿಂದ ಬೆಂಬಲಿಸಬೇಕು ಎಂದು ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಕೋರಿದರು.

ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಸೋಮವಾರ ಸ್ಥಳೀಯ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಸಿಎಎ ಬೆಂಬಲಿಸಿ ಸಹಿ ಸಂಗ್ರಹ ಹಾಗೂ ಅಂಚೆಪತ್ರ ಅಭಿಯಾನದಲ್ಲಿ ಮಾತನಾಡಿದರು. ಕಾಂಗ್ರೆಸ್ ವಿನಾಕಾರಣ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಮೂಲಕ ಮುಸ್ಲಿಮರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು.

ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯರ‌್ರಂಗಳ್ಳಿ ತಿಮ್ಮಾರೆಡ್ಡಿ ಮಾತನಾಡಿ, ಭಾರತೀಯರ ಸುರಕ್ಷತೆ ದೃಷ್ಟಿಯಿಂದ ಸಿಎಎ ಜಾರಿಗೆ ತಂದಿದ್ದು, ಬೆಂಬಲಿಸಿ ಪ್ರಧಾನಿ ಮೋದಿ ಕೈ ಬಲಪಡಿಸಬೇಕು ಎಂದರು. ಬಳಿಕ ಸಹಿ ಸಂಗ್ರಹಿಸಲಾಯಿತು. ಪ್ರಧಾನಿ ಮೋದಿಗೆ ಬರೆದ ಪತ್ರಗಳನ್ನು ಅಂಚೆಪೆಟ್ಟಿಗೆ ಹಾಕಲಾಯಿತು. ಮುಖಂಡರಾದ ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಜ್ಯೋತಿ, ಡಿ.ಶ್ರೀಧರ ಶ್ರೇಷ್ಠಿ, ಅಗಳಿ ಪಂಪಾಪತಿ, ಕೊಡಿದಲ ರಾಜು, ಸಿ.ಆರ್.ಹನುಮಂತ, ಎಸ್.ಎಸ್.ಎಂ.ನಾಗರಾಜ, ವಿ.ವಿದ್ಯಾಧರ, ಟಿ.ವಿ.ಸುದರ್ಶನರೆಡ್ಡಿ, ಹೂಗಾರ ರಮೇಶ್, ನಾಯಕರ ಮರೆಣ್ಣ, ಬಿ.ಕೆ.ವಿರೂಪಾಕ್ಷಿ, ವಿರುಪಣ್ಣ, ಬಿ.ವೆಂಕಟೇಶ್, ಎ.ರೇಣುಕಪ್ಪ, ಗಂಗಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net