ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೃಹತ್ ಮೆರವಣಿಗೆ: ಬಳ್ಳಾರಿಯಲ್ಲಿ ದೇಶಭಕ್ತ ನಾಗರಿಕ ವೇದಿಕೆಯ ಶಕ್ತಿ ಪ್ರದರ್ಶನ

Pro CAA Protest at Bellary 3 JAN 20
Published on

ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣೆ ಬೆಂಬಲಿಸಿ ದೇಶ ಭಕ್ತ ನಾಗರೀಕ ವೇದಿಕೆಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಿತು.

ನಾರಾಯಣ ರಾವ್ ಪಾರ್ಕ್​ ಬಳಿ ಸೇರಿದ ಸಾವಿರಾರು ಜನ ಹಿಂದುತ್ವ ಪ್ರತಿಬಿಂಬಿಸುವ ಕೇಸರಿ ಧ್ವಜ ಮತ್ತು ರಾಷ್ಟ್ರ ಧ್ವಜ ಹಿಡಿದು ಭಾರತ ಮಾತಾಕೀ ಜೈ ಎಂದು‌ ಮುಗಿಲು ಮುಟ್ಟುವಂತೆ ಜೈ ಘೋಷಗಳನ್ನು  ಕೂಗಿದರು.

ಮೆರವಣಿಗೆ ಸಾಗಿದ ಸುತ್ತಮುತ್ತಲಿನ‌ ಪ್ರದೇಶದ ಅಂಗಡಿಗಳು ಬಂದ್ ಮಾಡಲಾಗಿತ್ತು.ಅಗತ್ಯ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಂಡಿದ್ದರಿಂದ ಮೆರವಣಿಗೆ ಶಾಂತಿಯುತವಾಗಿತ್ತು.

ವಿವಿಧ ಮುಖಂಡರು ಮಾತನಾಡಿ, ಅನ್ಯ ದೇಶಗಳಲ್ಲಿ ತೊಂದರೆ ಅನುಭವಿಸುತ್ತಿರುವ ಅಲ್ಪ ಸಂಖ್ಯಾತರ ಅನುಕೂಲಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗಿದೆ.ಇದರಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆಯಾಗುವುದಿಲ್ಲ.ಕೆಲ ದೇಶ ದ್ರೋಹಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಯ್ದೆಯನ್ನು ವಿರೋಧಿಸಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ,  ಮುಖಂಡರಾದ  ಎಸ್‌.ಗುರುಲಿಂಗನಗೌಡ, ಪ್ರಕಾಶ್ ರೆಡ್ಡಿ, ಮುರಾರಿಗೌಡ, ರಾಮಲಿಂಗಪ್ಪ, ಎರ್ರಂಗಳಿ ತಿಮ್ಮಾರೆಡ್ಡಿ, ಹಲಕುಂದಿ‌ ಮಲ್ಲಿಕಾರ್ಜುನಗೌಡ ಸೇರಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net