

ಮಂಗಳೂರು : ಉಡುಪಿ ಪುತ್ತಿಗೆ ಮಠದ ವಿಶ್ವಗೀತಾ ಪರ್ಯಾಯೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ನಡೆದ ಸಂಧ್ಯಾ
ದರ್ಬಾರ್ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ವಿವಿಯ ಕುಲಾಧಿಪತಿ ಡಾ. ಸಿಎ ಎ.ರಾಘವೇಂದ್ರ ರಾವ್ ಅವರಿಗೆ
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪರ್ಯಾಯ ದರ್ಬಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಮಾತನಾಡಿ ‘ ಸಿಎ ಎ. ರಾಘವೇಂದ್ರ ರಾವ್ ಅವರಿಗೆ ಕೃಷ್ಣ ದೇವರ ಮೇಲೆ
ಅಪಾರ ಭಕ್ತಿ. ಧಾರ್ಮಿಕ ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ನಮ್ಮ ಲೇಖನಗಳ ವಿಶೇಷ ಅಭಿಮಾನಿಯಾ ಗಿ ಸದಾ ಸ್ಫೂ ರ್ತಿ ನೀಡುತ್ತಿರುತ್ತಾರೆ ಎಂದರು.
ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ, ಶ್ರೀನಿವಾಸ್ ವಿವಿಯ ನಿರ್ದೇಶಕರಾದೆ ಎ.ವಿಜಯಲಕ್ಷ್ಮಿ .ಆರ್.ರಾವ್, ಮಿತ್ರಾ.ಎಸ್.ರಾವ್ ಉಪಸ್ಥಿತರಿದ್ದರು .