

ಕುಂದಾಪುರ: ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆ ತಂದಿದ್ದಾರೆ. 2025ರ ಸಾಲಿನ ಸಿಎಸ್ ಪರೀಕ್ಷೆಯಲ್ಲಿಯೂ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆದು, ಇಡೀ ಉಡುಪಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂಕ ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಎಲ್ಲ ಅತ್ಯುತ್ತಮ ಸಾಧನೆ ವಾಡಲು ಸಿಎ, ಸಿಎಸ್ - ಸಿಎಂಎ ಫೌಂಡೇಶನ್ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಸತತವಾಗಿ ನೀಡಿದ್ದರಿಂದ ಸಾಧ್ಯವಾಗಿದೆ ಎಂದು ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ ಹೇಳಿದರು.
ಸುಣ್ಣಾರಿಯ ಎಕ್ಸಲೆಂಟ್ ಸಂಸ್ಥೆಯ ಆವರಣದಲ್ಲಿ ಸೋಮವಾರ ಸಿಎ, ಸಿಎಸ್- ಸಿಎಂಎ ಫೌಂಡೇಶನ್ ತರಗತಿಯ ಉದ್ಘಾಟನಾ ಸವಾರಂಭದಲ್ಲಿ ಮಾತನಾಡಿದರು.
ತರಗತಿಗಳನ್ನು ಉದ್ಘಾಟಿಸಿದ ತರಬೇತುದಾರ ನಾಗೇಂದ್ರ ಭಕ್ತ ವಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ತವಕ ಮತ್ತು ಸಂಸ್ಕಾರದ ಬಗ್ಗೆ ತಿಳಿಸಿ ಸಿಎ, ಸಿಎಸ್, ಸಿಎಂಎ ಫೌಂಡೇಶನ್ ಬಗ್ಗೆ ಸಂಪೂರ್ಣ ವಾಹಿತಿ ನೀಡಿದರು.
ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು. ಎಕ್ಸಲೆಂಟ್ ಹೈಸ್ಕೂಲಿನ ಮುಖ್ಯಶಿಕ್ಷಕಿ ಸರೋಜಿನಿ ಪಿ. ಆಚಾರ್ಯ ಸ್ವಾಗತಿಸಿದರು. ವಿದ್ಯಾರ್ಥಿನಿ ಚಿನ್ಮಯಿ ವಂದಿಸಿದರು. ವಿದ್ಯಾರ್ಥಿಗಳಾದ ಪ್ರಣೀತ್ ಹಾಗೂ ಸುವಿತ್ ನಿರೂಪಿಸಿದರು.