

ಕುಮಟಾ: ಇಲ್ಲಿನ ಮಣಕಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಕೊಂಕಣ ಎಜುಕೇಷನ್ ಟ್ರಸ್ಟ್ನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ಹಲವು ವಿಭಾಗಗಳಲ್ಲಿ ವಿಜೇತರಾಗಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಕುಮಾರ ಸುಚಿತ ನಾಯ್್ಕ 200 ಮೀಟರ್ ಓಟದಲ್ಲಿ ದ್ವಿತೀಯ, 100 ಮೀಟರ್ ಓಟದಲ್ಲಿ ತೃತೀಯ, ಯುವರಾಜ್ ಭಟ್ 1500 ಮೀಟರ್ ಓಟದಲ್ಲಿ ದ್ವಿತೀಯ, ಪ್ರೀತಂ ಶಿಗ್ಗಾಂವಿ ಹ್ಯಾಮರ್ ಎಸೆತದಲ್ಲಿ ದ್ವಿತೀಯ, ಬಾಲಕರ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ತೇಜಾ ನಾಯ್ಕ 100, 200 ಮೀ. ಓಟದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ಪ್ರಥಮ, ಸಾವನೀ ಕುಂಭೇಶ್ವರ 400 ಮೀ. ಓಟದಲ್ಲಿ ದ್ವಿತೀಯ, ಲಹರಿ ನಾಯಕ 1500 ಮೀ. ಓಟದಲ್ಲಿ ತೃತೀಯ, ಪ್ರಿಯಾ ಶೇಟ್ ಹರ್ಡಲ್ಸ್ 100 ಮೀ. ಓಟದಲ್ಲಿ ಪ್ರಥಮ, ವಿಭಾ ಹೆಗಡೆ ಶಾಟ್ಫುಟ್ನಲ್ಲಿ ತೃತೀಯ, ಎಚ್.ಎಂ. ಶ್ರೀರಕ್ಷಾ 100 ಮೀ. ಓಟದಲ್ಲಿ ತೃತೀಯ, ಸಿಂಚನಾ ಭಟ್ ಚೆಸ್ನಲ್ಲಿ ಪ್ರಥಮ, ಬಾಲಕಿಯರ 4*100 ಮೀ. ರಿಲೇ ಪ್ರಥಮ, ಬಾಲಕಿಯರ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಟಿ.ಜಿ.ಟಿ ವಿಭಾಗದಲ್ಲಿ ಶ್ರೀವತ್ಸ ಭಟ್ 100, 200 ಮೀ. ಓಟದಲ್ಲಿ ಪ್ರಥಮ, ಸಾತ್ವಿಕ ನಾಯಕ 400 ಮೀ. ಓಟದಲ್ಲಿ ಪ್ರಥಮ, ಟೇಬಲ್ ಟೆನಿಸ್ನಲ್ಲಿ ಅನಮೋಲ್ ಪ್ರಥಮ, ಜಿ. ಪ್ರೀತಂ ಬ್ಯಾಡ್ಮಿಂಟನ್ನಲ್ಲಿ ಪ್ರಥಮ, ನಮ್ರತಾ ದೇಶಭಂಡಾರಿ 400 ಮೀ. ಓಟದಲ್ಲಿ ಪ್ರಥಮ, ರಾಧಿಕಾ ಎಂ. ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕಿ ಸುಮಾ ಪ್ರಭು ತಿಳಿಸಿದ್ದಾರೆ.