

ಮಂಗಳೂರು : ಸಮಾಜದಲ್ಲಿ ಕೋಮು ದ್ವೇಷ ಹರಡುವ , ಸಂಘರ್ಷ ಸೃಷ್ಟಿಸುವ ಧರ್ಮ ಗ್ರಂಥಗಳನ್ನು ನಿಷೇಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ಅಶಾಂತಿಗೆ ಗೋಹತ್ಯೆ, ಗೋ ಕಳ್ಳತನ, ಲವ್ ಜಿಹಾದ್ ಮಾತ್ರವಲ್ಲ ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳೂ ಕಾರಣವಾಗಿವೆ. ಕೋಮುವಾದ ಬಿತ್ತುವ ಇಂತಹ ಮತಗ್ರಂಥಗಳನ್ನು ನಿಷೇಧಿಸುವ ಬಗ್ಗೆ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕು. ಎಂದು ಮಾಜಿ ಸಚಿವ, ಎಂಎಲ್‌ಸಿ ಸಿ.ಟಿ.ರವಿ ಹೇಳಿದರು
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನೆ ಮಾಡುವವರ ಮೇಲೆ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಕಾಫಿರರನ್ನು ಕೊಲ್ಲುವಂತೆ ಸಂದೇಶ ನೀಡುವ ಮತ ಗ್ರಂಥವಿದೆ. ತಾಕತ್ ಇದ್ದರೆ ಸರ್ಕಾರ ಅಂತಹ ಮತಗ್ರಂಥಗಳ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನ ನಾಸಿರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದಾಗ ವಿಧಾನ ಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು
ಬೆಂಬಲಿಗರು ಘೋಷಣೆ ಕೂಗಿದ್ದರು. ಇದನ್ನು ಖಂಡಿಸದ ನಾಸಿರ್ ಹುಸೇನ್ ದ.ಕ.ಜಿಲ್ಲೆಗೆ ಬಂದು ಶಾಂತಿ ಪ್ರಸ್ತಾಪನೆ ಮಾಡಿದ್ದಾರೆ. ನಾಸಿರ್ ಹುಸೇನ್ ನೇತ್ರತ್ವದ ವರದಿ ಎಷ್ಟು ಪ್ರಾಮಾಣಿಕ ವರದಿಯಾಗಿರುತ್ತದೆ ಎನ್ನುವ ಸಂಶಯ ಸಾರ್ವಜನಿಕ ವಲಯದಲ್ಲಿ ಇದೆ. ಪೊಲೀಸರು
ಸಂಘರ್ಷದ ಮೂಲ ಪತ್ತೆ ಮಾಬೇಕು. ಗೋ ಹತ್ಯೆ, ಲವ್ ಜಿಹಾದ್ ಮತಾಂತರ ಇವು ಸಂಘರ್ಷದ ಮೂಲವಾಗಿದ್ದು, ಇದನ್ನು ನಿಲ್ಲಿಸಿದರೆ ಕೋಮು ಸಂಘರ್ಷ ನಡೆಯುವುದಿಲ್ಲ. ಆದರೆ ಇಲ್ಲಿ ಗೋ ಹತ್ಯೆ ಮಾಡುವವರು ಮತ್ತು ಹತ್ಯೆ ತಡೆಯುವವರನ್ನು ಒಂದೇ ತಕ್ಕಡಿಯಲ್ಲಿ ಇರಿಸಿ ನೋಡಲಾಗುತ್ತದೆ ಎಂದು ಅವರು ಆರೋಪಿಸಿದರು.
ಹಿಂದು ಸಂಘಟನೆಗಳನ್ನು ಪೊಲೀಸರು ಕಮ್ಯುನಲ್ ಆರ್ಗನೈಸೇಶನ್ ಎಂದಿದ್ದಾರೆ. ಬಜರಂಗದಳವನ್ನು ಕಮ್ಯುನಲ್ ಎಂದು ಹೇಗೆ ಕರೆಯುತ್ತೀರಿ? ಹಿಂದೂ ವಿಚಾರಧಾರೆಗಳು ಕಮ್ಯುನಲ್ ಹೇಗಾಗುತ್ತದೆ ? ಹತ್ಯೆ ಪ್ರಕರಣಗಳಲ್ಲಿ ಕೆಲವು ವ್ಯಕ್ತಿಗತ ಕಾರಣವೂ ಇರಬಹುದು,
ತನಿಖೆ ಆಗಲಿ, ಆದರೆ ಅದಕ್ಕೂ ಮೊದಲೇ ಉಸ್ತುವಾರಿ ಸಚಿವರು ವಿಹಿಂಪ, ಬಜರಂಗದಳ ಮುಖಂಡರ ಮೇಲೆ ಹೇಗೆ ಆರೋಪ ಮಾಡುತ್ತೀರಿ ? ಎಂದು ಸಿ.ಟಿ.ರವಿ ಪ್ರಶ್ನಿಸಿದರು.
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಮಾನತಿನ ಬಗ್ಗೆ ಸಿ.ಟಿ.ರವಿ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬೆಂಗಳೂರು ಕಮಿಷನರ್. ಸರ್ಕಾರ ರಾಜಕೀಯ ಲಾಭ
ತೆಗೆದುಕೊಳ್ಳಬೇಕು ಎನ್ನುವುದು ಕಮಿಷನರ್ ಆಸೆಯಾಗಿತ್ತು. ಕ್ರಿಕೆಟ್ ಆಟಗಾರರ ಜತೆ ಕಾಂಗ್ರೆಸ್ ಮುಖಂಡರ ಮಕ್ಕಳು, ಮೊಮ್ಮಕ್ಕಳು ಸೆಲ್ಫಿ ತೆಗೆದುಕೊಳ್ಳಲಿ ಎಂದು ಕಮಿಷನರ್ ವ್ಯವಸ್ಥೆ ಮಾಡಿದ್ರು. ಹೀಗೆ ಕಮಿಷನರ್ ಅವರೇ ಎಲ್ಲವನ್ನೂ ಸಂಘಟಿಸಿದಂತೆ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದು ಸಿ.ಟಿ. ರವಿ ಆರೋಪಿಸಿದರು.
ಕಾಲ್ತುಳಿತ ಘಟನೆ ಆದ ಬಳಿಕವೂ ಸಿಎಂ ಹೊಟೇಲಿಗೆ ತೆರಳಿ ದೋಸೆ ತಿಂದದ್ದು ಹೌದಾದರೆ ಅವರಿಗೆ ಮನುಷ್ಯತ್ವ ಇಲ್ಲ. ಭಗವಂತ ಅವರನ್ನು
ಕ್ಷಮಿಸುವುದಿಲ್ಲ. ಅವರಿಗೆ ಮಕ್ಕಳನ್ನು ಕಳೆದುಕೊಂಡ ಹೆತ್ತವರ, ಸಮಾಜದ ಶಾಪ ತಟ್ಟುತ್ತದೆ. ಈ ಮಾಹಿತಿ ಸುಳ್ಳು ಆಗಲಿ ಎಂದು ಆಶಿಸುತ್ತೇನೆ. ಆದರೆ ಈ ಮಾಹಿತಿ ಸತ್ಯ ಆಗಿದ್ದರೆ ಸಿಎಂ ಒಂದು ಕ್ಷಣವೂ ಅಧಿಕಾರದಲ್ಲಿ ಇರಲೇ ಬಾರದು ಎಂದರು. ಹೊರಗಡೆ ಕಾಲ್ತುಳಿತಕ್ಕೊಳಗಾದ
ಗಾಯಾಳುಗಳನ್ನು ಕೈಯಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರು. ಒಳಗಡೆ ಉಪಮುಖ್ಯಮಂತ್ರಿ ಟ್ರೋಫಿ ಎತ್ತಿಕೊಂಡಿದ್ದರು. ಹಾಗಾದರೆ ಈ ಎಲ್ಲ ಘಟನೆಗಳಿಗೆ ಹೊಣೆ ಯಾರು ಎಂದು ಸಿ.ಟಿ. ರವಿ ಪ್ರಶ್ನಿಸಿದರು.
ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್,ರಾಜಗೋಪಾಲ ರೈ, ಮನೋಹರ ಶೆಟ್ಟಿ, ಶೈಲೇಶ್, ಅರುಣ್ ಶೇಟ್, ಜಗದೀಶ್ ಶೇಣವ ಉಪಸ್ಥಿತರಿದ್ದರು.