

ಖಾನಾಪುರ: ಕಳೆದ ವರ್ಷ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ನಡೆದ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದಾಗ ಬೆಂಬಲಿಸಿದ ಅಪಾರ ಬಿಜೆಪಿ ಕಾರ್ಯಕರ್ತರು, ಹಿರಿಯ ಪದಾಧಿಕಾರಿಗಳು ಹಾಗಹೂ ವಕೀಲರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕೃತಜ್ಞತೆ ಸಲ್ಲಿಸಿದರು.
ಪಟ್ಟಣದ ಶಿವ ಸ್ಮಾರಕದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು. ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ ಪ್ರಕರಣದಲ್ಲಿ ಪೊಲೀಸರು ಖಾನಾಪುರ ಪೊಲೀಸ್ ಠಾಣೆಗೆ ಕರೆತಂದಾಗ ಇಲ್ಲಿನ ಬಿಜೆಪಿ ಕಾರ್ಯಕರ್ತರು ಬೆಂಬಲಿಸಿ, ಧೈರ್ಯ ತುಂಬಿದರು. ಖಾನಾಪುರ ತಾಲೂಕು ಸಮದ್ಧ ತಾಲೂಕು. ಈ ಪ್ರದೇಶವು ಬಹುಭಾಷಾ ಮರಾಠಿಯಾಗಿದ್ದರೂ, ಈ ಪ್ರದೇಶದ ಜನರು ತಮ್ಮ ಭಾಷಾ ಸಂಬಂಧ ಉಳಿಸಿಕೊಂಡು ಅನ್ಯೂನ್ಯವಾಗಿರುವುದು ಶ್ಲಾಘನೀಯ ಎಂದರು.
ತಾಲೂಕು ಮಂಡಲ ಅಧ್ಯಕ್ಷ ಬಸವರಾಜ ಸಾನಿಕೊಪ್ಪ, ಶಾಸಕ ವಿಠ್ಠಲ ಹಲಗೇಕರ, ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕ ಅರವಿಂದ ಪಾಟೀಲ, ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ ಪಾಟೀಲ, ಧನಶ್ರೀ ಸರದೇಸಾಯಿ, ಡಾ.ರವಿ ಪಾಟೀಲ, ಮುರುೇಂದ್ರ ಪಾಟೀಲ, ಜ್ಯೋತಿಭಾ ರೇಮನಿ, ಮಲ್ಲಪ್ಪ ಮಾರಿಹಾಳ, ಮಾಜಿ ಶಾಸಕ ಅರವಿಂದ ಪಾಟೀಲ ಇತರರಿದ್ದರು.