ಮಂಡ್ಯದಲ್ಲಿ ಜೆಡಿಎಸ್, ಬಿಜೆಪಿ ಯುಗಾರಂಭ: ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ

C.S. Puttaraju criticism against Congress Mandya
Published on

ಮಂಡ್ಯ: ಇಂಡಿಯಾ ಎಂದರೇ ಮಂಡ್ಯ, ಮಂಡ್ಯ ಎಂದರೇ ಇಂಡಿಯಾ. ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಹೊಸ ಯುಗ ಪ್ರಾರಂಭವಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ನಗರದ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಯಾರಿಗೆ ಬುದ್ಧಿ ಕಲಿಸಬೇಕೋ ಕಲಿಸಿಕೊಂಡು ಬಂದಿದ್ದೆ. ಕುಮಾರಣ್ಣನ ಜನಪ್ರಿಯತೆಗೆ ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ. ಜಿಲ್ಲೆಯ ಜನರಿಗೆ ಅಭಿನಂದನೆಗಳು. ಜೆಡಿಎಸ್ ಸಂಕಷ್ಟದಲ್ಲಿರುವಾಗ ಗೆದ್ದಿರುವುದು ಸಂತಸ ತಂದಿದೆ. ಇಂದಿನಿಂದ ಕಾಂಗ್ರೆಸ್‌ನ ಬಂಡವಾಳ ಬಯಲಾಗುತ್ತದೆ ಎಂದರು.

ಈ ರಾಜ್ಯ ಸರ್ಕಾರ ಮುನ್ನಡೆಸುವುದು ಕಷ್ಟವಿದೆ. ಮುಂದೆ ಏನೇನೂ ಆಗುತ್ತದೆ ಎಂದು ನೋಡುತ್ತೀರಿ. ಪೊಳ್ಳು ಭರವಸೆ ಮೇಲೆ ಸರ್ಕಾರ ನಡೆಯಲ್ಲ. ಲೋಕಸಭೆಯಲ್ಲಿ ಸೋತರೇ ಗ್ಯಾರಂಟಿ ನಿಲ್ಲಿಸುವ ವಿಚಾರ ಸರ್ಕಾರದ ಅಜೆಂಡಾ ಆಗಿದೆ. ನೂರಕ್ಕೆ ಸಾವಿರ ಭಾಗ ಕುಮಾರಸ್ವಾಮಿ ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗುತ್ತಾರೆ. ಅವರಿಗೆ ಕೃಷಿ ಸಚಿವ ಸ್ಥಾನ ಕೊಟ್ಟರೇ ಒಳ್ಳೆಯದು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net