ಶ್ರೀಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಸಿ.ಎಸ್.ಕುಬೇರ ಆಯ್ಕೆ

27 ckm 2
ಚಿಕ್ಕಮಗಳೂರು ಆಜಾದ್ ಪಾರ್ಕ್ ಸಾರ್ವಜನಿಕ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಸಿ.ಎಸ್.ಕುಬೇರ ಅವಿರೋಧವಾಗಿ ಆಯ್ಕೆಯಾಗಿದ್ದು, ಸಹಸದಸ್ಯರು ಅಭಿನಂದಿಸಿದರು. ವರಸಿದ್ಧಿ ವೇಣುಗೋಪಾಲ್, ಎಂ.ಎಸ್.ಉಮೇಶ್ ಕುಮಾರ್, ಚೇತನ್ ಏಕಾಂತ್ ರಾಮು, ಸಿ.ಆರ್.ಕೇಶವಮೂರ್ತಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಆಜಾದ್ ಪಾರ್ಕ್ ಸಾರ್ವಜನಿಕ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಸಿ.ಎಸ್.ಕುಬೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀ ಬೋಳ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಗಣಪತಿ ಸೇವಾ ಸಮಿತಿಯ ಕಟ್ಟಡದಲ್ಲಿ ನಿಕಟಪೂರ್ವ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ನಡೆಯಿತು.

ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಕಳೆದ ಮೂರು ವರ್ಷಗಳಿಂದ ಗಣಪತಿ ಸೇವಾ ಸಮಿತಿ ಸೇವಾ ಕಾರ್ಯವನ್ನು ಮಾಡಿತ್ತು. ಹಾಗಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಕಮಿಟಿ ಅಸ್ತಿತ್ವಕ್ಕೆ ತರಲು ಸರ್ವ ಸದಸ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಗಣಪತಿ ಸೇವಾ ಸಮಿತಿಯಲ್ಲಿ ಈ ಹಿಂದೆ ಹಲವು ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಸದಸ್ಯ ಸಿ.ಎಸ್.ಕುಬೇರ ಅವರ ಹೆಸರನ್ನು ಸದಸ್ಯ ಎಂ.ಎಸ್.ಉಮೇಶ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರು. ಇದಕ್ಕೆ ಧ್ವನಿ ಮತದಿಂದ ಉಳಿದ ಎಲ್ಲ ಸದಸ್ಯರು ಅನುಮೋದಿಸಿದರು.
ಉಳಿಕೆ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಿಕೊಳ್ಳಲು ನೂತನ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಯಿತು. ಇದಕ್ಕೂ ಮೊದಲು ಎರಡು ವರ್ಷಗಳ ಲೆಕ್ಕಪತ್ರವನ್ನ ಖಜಾಂಚಿ ಎಚ್.ವೈ.ಮೋಹನ್ ಕುಮಾರ್ ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆದರು. ೮,೭೧,೨೫೯ ರೂಪಾಯಿ ಉಳಿತಾಯ ಮಾಡಿದ್ದು, ಸರ್ವ ಸದಸ್ಯರ ಸಮ್ಮತಿಯ ಮೇರೆಗೆ ೭ ಲಕ್ಷಗಳನ್ನು ಮುಂದಿನ ಎಂಟು ವರ್ಷಗಳ ಅವಧಿಗೆ ಮಹಿಳಾ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಲು ತೀರ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಚೇತನ್ ಏಕಾಂತ ರಾಮು ವರದಿ ಮಂಡಿಸಿ ಅನುಮೋದನೆ ಪಡೆದರು. ಮಾಜಿ ಅಧ್ಯಕ್ಷರಾದ ಸಿ.ಆರ್. ಕೇಶವಮೂರ್ತಿ, ಎನ್.ಈಶ್ವರಪ್ಪ ಕೋಟೆ, ವಿರೂಪಾಕ್ಷಪ್ಪ, ಎಂ.ದಿವಾಕರ್, ಸಿ.ಎಸ್.ಏಕಾಂತ ರಾಮು, ಎಲ್.ವಿ.ಕೃಷ್ಣಮೂರ್ತಿ, ಎಂ.ಕೆ.ಸಚಿನ್, ಸಿ.ಶಿವಶಂಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net