ಗ್ಯಾರಂಟಿ ಬಿಟ್ಟಿ ಭಾಗ್ಯವಲ್ಲ ಬಡವರಿಗೆ ಸೌಭಾಗ್ಯ

C S Dwarakanath
Published on

ಕಲಬುರಗಿ: ರಾಜ್ಯ ಸರ್ಕಾರದಿಂದ ಬಡವರಿಗೆ ನೀಡುತ್ತಿರುವ ಐದು ಗ್ಯಾರಂಟಿಗಳನ್ನು ಕೆಲವರು ಬಿಟ್ಟಿ ಕೊಡುಗೆಗಳು ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ. ಅವು ಬಿಟ್ಟಿ ಭಾಗ್ಯಗಳು ಅಲ್ಲ ರಾಜ್ಯದಲ್ಲಿ ಸಂಕಷ್ಟದಲ್ಲಿರುವವರಿಗೆ ಸೌಭಾಗ್ಯಗಳಾಗಿವೆ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ ಹೇಳಿದರು.

ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ಬಡ ಕುಟುಂಬವರು ತಿಂಗಳಿಗೆ ನಾಲ್ಕರಿಂದ ಐದು ಸಾವಿರ, ವಾರ್ಷಿಕ ಸುಮಾರು ೫೦ರಿಂದ ೬೦ಸಾವಿರ ರೂ.ವರೆಗೆ ನೇರ ಸೌಲಭ್ಯ ಪಡೆಯುತ್ತಿವೆ. ಜಾತಿ, ಮತ ಭೇದವಿಲ್ಲದೆ ಕಡುಬಡವರಿಗೆ ತಲುಪುತ್ತಿರುವುದು ದೇಶದಲ್ಲೇ ಮೊದಲು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು.

ಐದು ಗ್ಯಾರಂಟಿ ಯೋಜನೆಗಳಿಂದ ೧.೨ ಕೋಟಿ ಕುಟುಂಬಗಳನ್ನು ಬಡತನದಿಂದ ಮೇಲೆತ್ತಲಿವೆ. ಇದು ಸಾರ್ವತ್ರಿಕ ಮೂಲ ಆದಾಯ ಎನ್ನಲಾಗುತ್ತದೆ. ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಮಾದರಿ ಯೋಜನೆ ಇದಾಗಿದ್ದು, ಈಗಾಗಲೇ ವಿದೇಶಗಳಲ್ಲಿ ಇಂತಹ ಯೋಜನೆಗಳು ಜಾರಿಯಲ್ಲಿವೆ. ಕಾನೂನಿನ ರಾಜನೀತಿ ನಿರ್ದೇಶಕ ತತ್ವಗಳ ಆಶಯವರು ಸರ್ವರಿಗೂ ಆಹಾರ, ಉದ್ಯೋಗ ಸೇರಿ ಕನಿಷ್ಠ ಸೌಲಭ್ಯ ಒದಗಿಸುವುದೇ ಆಗಿದೆ. ಅದನ್ನು ಗ್ಯಾರಂಟಿ ಯೋಜನೆಗಳು ಹೊಂದಿವೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಪ್ರಮುಖರಾದ ಸುನೀಲ ಮಾನ್ಪಡೆ, ನಾಗರಾಜ, ಭೀಮರಾವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net