

ಕೊಳ್ಳೇಗಾಲ: ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್‌ನಲ್ಲಿ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ಸಿ.ಎನ್.ರೇಖಾ ರಮೇಶ್ ಅವರ 45ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಹಾಗೂ ನೂರಕ್ಕೂ ಹೆೆಚ್ಚು ಪುರುಷರಿಗೆ ಪಂಚೆ, ಶರ್ಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿ.ಎನ್.ರೇಖಾ ರಮೇಶ್ ಕೇಕ್ ಕತ್ತರಿಸುವ ಮೂಲಕ ಜನ್ಮ ದಿನವನ್ನು ಆಚರಿಸಿಕೊಂಡರು. ಕಾಂಗ್ರೆಸ್ ಮುಖಂಡರು, ಹಿತೈಷಿಗಳು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ರೇಖಾ ರಮೇಶ್ ಅವರಿಗೆ ಹೂಗುಚ್ಛ, ಶಾಲು, ಹಾರ ಹೊದಿಸಿ ಶುಭಾಶಯ ತಿಳಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಪತ್ನಿ ಮಂಜುಳಾ ಕೃಷ್ಣಮೂರ್ತಿ ಮಾತನಾಡಿ, ರಾಜಾಕೀಯ ಕ್ಷೇತ್ರ ಜನ ಸೇವೆಗೆ ಮೀಸಲಾಗಿರುತ್ತದೆ. ಎಲ್ಲ ಕ್ಷೇತ್ರಗಳಿಗಿಂತಲೂ ಜನ ಸೇವೆಯ ಕ್ಷೇತ್ರ ವಿಭಿನ್ನ, ವಿಶೇಷವಾದದ್ದು. ಇಲ್ಲಿ ಸವಾಲುಗಳು ಹೆಚ್ಚಿರುತ್ತದೆ. ಜನ ಸಾಮಾನ್ಯರಿಗೆ ಸ್ಪಂದಿಸಬೇಕಾಗಿರುತ್ತದೆ. ಸಿ.ಎನ್.ರೇಖಾ ಅವರು ನಗರಸಭೆ ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಜನ ಸೇವೆ ಮಾಡುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬವನ್ನು ಜನರೊಂದಿಗೆ ಆಚರಣೆ ಮಾಡಿಕೊಳ್ಳುತ್ತಿರುವುದು ಪ್ರಶಂಸಿಸುವ ವಿಚಾರವಾಗಿದೆ ಎಂದರು.
ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಧುವನಹಳ್ಳಿ ಮಾತನಾಡಿ, ಸಿ.ಎನ್.ರೇಖಾ ರಮೇಶ್ ಅವರು ಎರಡನೇ ಬಾರಿಗೆ ನಗರಸಭೆ ಅಧ್ಯಕ್ಷೆಯಾಗಿದ್ದಾರೆ. ಅಧಿಕಾರಾವಧಿಯನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿ, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರಾದ ಶಾಂತರಾಜು, ಮನೋಹರ್, ರಾಘವೇಂದ್ರ, ಪ್ರಕಾಶ್, ರಾಮಕೃಷ್ಣ, ನಾಸೀರ್ ಶರೀಫ್, ಧರಣೇಶ್, ಸುಮಸುಬ್ಬಣ್ಣ, ಭಾಗ್ಯಾ, ನಾಮ ನಿರ್ದೇಶಿತ ಸದಸ್ಯ ಸ್ವಾಮಿ ನಂಜಪ್ಪ, ಅನ್ಸರ್ ಬೇಗ್, ಮಾಜಿ ಅಧ್ಯಕ್ಷ ರಮೇಶ್, ಭೀಮನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ, ಮುಖಂಡರಾದ ಪ್ರಭುಸ್ವಾಮಿ, ದಿಲೀಪ್, ಹರೀಶ್ ಮಾಸ್ಟರ್, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಕ್ರೈಸ್ತ ಜನಾಂಗದ ಮುಖಂಡ ಜಿ.ಸೆಲ್ವರಾಜ್ ಮತ್ತಿರಿದ್ದರು.