ಕರ್ನಾಟಕ- ತಮಿಳುನಾಡು ಪಂದ್ಯ ಡ್ರಾ

Published on

ಹುಬ್ಬಳ್ಳಿ: ಆತಿಥೇಯ ಕರ್ನಾಟಕ ಹಾಗೂ ಪ್ರವಾಸಿ ತಮಿಳುನಾಡು ತಂಡಗಳ ನಡುವೆ ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ನಡೆದ ಪ್ರಸಕ್ತ ಖುತುವಿನ ಕರ್ನಲ್ ಸಿ.ಕೆ. ನಾಯ್ಡು (23 ವಯೋಮಿತಿ) ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಲೀಗ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಪಂದ್ಯದ ಕೊನೆಯ ದಿನವಾದ ಬುಧವಾರ ಆಟ ನಡೆಯಲಿಲ್ಲ. ಮಧ್ಯಾಹ್ನ 2.30ಕ್ಕೆ ಮೈದಾನದ ಸ್ಥಿತಿಯನ್ನು ಪರಿಶೀಲಿಸಿದ ಅಂಪೈರ್ ಗಳು ದಿನದ ಆಟವನ್ನು ರದ್ದುಪಡಿಸಿದರು.

ಇದರಿಂದ ಉಭಯ ತಂಡಗಳು ಡ್ರಾ ಗೆ ತೃಪ್ತಿಪಟ್ಟವು. ಕರ್ನಾಟಕ ಹಾಗೂ ತಮಿಳುನಾಡು ತಲಾ 5 ಅಂಕಗಳನ್ನು ಸಂಪಾದಿಸಿದವು. ತಮಿಳುನಾಡು ಪ್ರಥಮ ಇನ್ನಿಂಗ್ಸ್ ನಲ್ಲಿ 312 ರನ್ ಗಳಿಸಿದ್ದರೆ, ಕರ್ನಾಟಕ 3 ವಿಕೆಟ್ ಗೆ 42 ರನ್ ಗಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net