ಸಿ.ಎಚ್.ವಿಜಯಶಂಕರ್‌ಗೆ ಕಾವೇರಿ ಪ್ರಶಸ್ತಿ ಪ್ರದಾನ

SRP_09-01jpj
ಮೇಘಾಲಯ ರಾಜ್ಯದ ರಾಜಧಾನಿ ಶಿಲ್ಲಾಂಗ್‌ನ ರಾಜಭವನದಲ್ಲಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರಿಗೆ ಶ್ರೀ ಮಠದ ವತಿಯಿಂದ ಅಂತಾರಾಷ್ಟ್ರೀಯ ಕಾವೇರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಕೆ.ಸಂಗ್ಮಾ, ಉಪ ಮುಖ್ಯಮಂತ್ರಿ ಪಿ.ತೈನಸಂಗ್, ಮ್ಯಾರಿಕೋಸ್ ಮಾರ್ಕ್ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರಿಗೆ ಪಟ್ಟಣ ಹೊರವಲಯದ ಚಂದ್ರವನ ಆಶ್ರಮದ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಅಂತಾರಾಷ್ಟ್ರೀಯ ಕಾವೇರಿ ಪ್ರಶಸ್ತಿಯನ್ನು ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಪ್ರದಾನ ಮಾಡಿದರು.

ಮೇಘಾಲಯ ರಾಜ್ಯದ ರಾಜಧಾನಿ ಶಿಲ್ಲಾಂಗ್‌ನ ರಾಜಭವನಕ್ಕೆ ಮಠದ ಆಡಳಿತ ಮಂಡಳಿಯ 18 ಮುಖ್ಯಸ್ಥರೊಂದಿಗೆ ತೆರಳಿದ ಶ್ರೀಗಳು ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರು ಎಲ್ಲೇ ಇದ್ದರೂ ತಮ್ಮತನವನ್ನು ಬಿಟ್ಟುಕೊಡದೇ, ಭಾರತದಲ್ಲಿ ಸೇವೆಗೆಂದೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಏಕೈಕ ವ್ಯಕ್ತಿ. ಜಗತ್ತು ಬೆಳಗುವ ಸೂರ್ಯ ಹೇಗೆ ಯಾವ ಜಾತಿ, ಧರ್ಮದ ತಾರತಮ್ಯವಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣುತ್ತಾನೋ ಹಾಗೇ ವಿಜಯಶಂಕರ್ ಎಲ್ಲರನ್ನೂ ಸಮನಾಗಿ ಕಾಣುತ್ತಾರೆ ಎಂದರು ಹೇಳಿದರು.

ಸಿ.ಎಚ್.ವಿಜಯಶಂಕರ್ ಮೋಕ್ಷಸಾಧಕರಾಗಿ, ಧರ್ಮಪಾಲಕರಾಗಿ ರಾಜ್ಯಪಾಲರಾಗಿದ್ದಾರೆ. ನಮ್ಮ ನಾಡಿನ ಇಂತಹ ಮುಗ್ಧ ಮನಸ್ಸಿನ ಶ್ರೀಯುತರು ಮೇಘಾಲಯದಲ್ಲಿ ಸೇವೆ ಮಾಡುತ್ತಿರುವುದು ಎಲ್ಲರ ಪುಣ್ಯ. ಇವರಿಗೆ ಚಂದ್ರವನ ಮಠದ ರಾಷ್ಟ್ರಮಟ್ಟದ ಕಾವೇರಿ ಪ್ರಶಸ್ತಿ ಪ್ರದಾನ ಮಾಡಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಮಾತನಾಡಿ, ಕರ್ನಾಟಕ ಹಾಗೂ ತಾಯಿ ಮಣ್ಣಿನ ಶ್ರೀಮಠದ ಸಂಸ್ಕೃತಿ, ಪರಂಪರೆ, 113 ವರ್ಷಗಳ ಕಾಲ ಬದುಕಿದ್ದ ಶತಾಯುಷಿ ಪರಮಪೂಜ್ಯ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳಂತೆ ಇಂದಿಗೂ ಲೋಕಕಲ್ಯಾಣ ಕಾರ್ಯಗಳು ಮುಂದುವರಿಯುತ್ತಿರುವುದು ಶ್ಲಾಘನೀಯ. ತಾವು ಜೀವನದಲ್ಲಿ ಇದುವರೆಗೂ ಯಾವುದೇ ಪ್ರಶಸ್ತಿ ಪಡೆದಿಲ್ಲ, ಆದರೆ ಶ್ರೀ ಮಠದೊಂದಿಗಿನ ಅವಿನಾಭಾವ ಸಂಬಂಧ ಹಾಗೂ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ ಮೇಲಿನ ಗೌರವಕ್ಕಾಗಿ ಪಡೆದ ಮೊದಲ ಪ್ರಶಸ್ತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ, ಉಪ ಮುಖ್ಯಮಂತ್ರಿ ಪಿ.ತೈನಸಂಗ್, ಮ್ಯಾರಿಕೋಸ್ ಮಾರ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಪಿ.ಶಕೀರ್ ಅಹಮ್ಮದ್, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಬಹ್ಮದತ್ ತಿವಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net