ಸಿ.ಎಚ್.ಪಾಟೀಲರ ಸೇವೆ ಮಾದರಿ

19Aigali2
Published on

ಐಗಳಿ: ಸಾತ್ವಿಕ ಸಜ್ಜನ ವ್ಯಕ್ತಿತ್ವದ ನಿಸ್ವಾರ್ಥ ಸಮಾಜ ಸೇವಕ ಸಿ.ಎಚ್.ಪಾಟೀಲರ ಸಮಾಜ ಸೇವೆ ನಮಗೆಲ್ಲ ಮಾದರಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿ.ಎಚ್.ಪಾಟೀಲರ 4ನೇ ಪುಣ್ಯಸ್ಮರಣೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ನಿಸ್ವಾರ್ಥ ಸಮಾಜ ಸೇವೆ ಅವರನ್ನು ಬಹು ಎತ್ತರಕ್ಕೆ ಬೆಳೆಸಿತು ಎಂದು ಸ್ಮರಿಸಿದರು.

ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಹಿರಿಯರಾದ ಸದಾಶಿವ ಬುಟಾಳೆ, ಸಿ.ಎಸ್. ನೇಮಗೌಡ ಅವರು ಮತನಾಡಿ, ಓಳ್ಳೆಯ ಸ್ವಭಾವ ಮತ್ತು ಸಿ.ಎಚ್.ಪಾಟೀಲರ ಒಡನಾಟ ಸ್ಮರಿಸಿದರು. ಸಾನ್ನಿಧ್ಯ ವಹಿಸಿದ್ದ ಯಕ್ಕಂಚಿ ಗುರುದೇವ ತಪೋವನದ ಗುರುಪಾದ ಸ್ವಾಮೀಜಿ ಮತ್ತು ಅಧ್ಯಕ್ಷತೆ ವಹಿಸಿದ್ದ ಅಪ್ಪಯ್ಯ ಮಹಾರುದ್ರಯ್ಯ ಹಿರೇಮಠ ಆರ್ಶಿರ್ವಚನ ನೀಡಿದರು.

ಮುಖಂಡರಾದ ಮಲ್ಲೇಶ ಸವದಿ, ಶಾಂತಿನಾಥ ನಂದೇಶ್ವರ, ಎಂ.ಎಂ.ಗೋಟಖಿಂಡಿ, ಕಾಶಿನಾಥ ಕುಂಬಾರ‌್ಕರ, ಅಣ್ಣಾರಾಯ ಹಾಲಳ್ಳಿ, ಎಸ್.ಎಸ್.ಮಾಕಾಣಿ, ನೂರಹ್ಮದ್ ಡೊಂಗರಗಾಂವ, ಡಾ.ಆರ್. ಡಿ.ವಾಘಮೋರೆ, ಅಪ್ಪು ನೇಮಗೌಡ, ಮನೋಹರ ಮದಬಾವಿ ಇತರರು ಇದ್ದರು. ಪ್ರಕಾಶ ಪಾಟೀಲ ಸ್ವಾಗತಿಸಿದರು, ಕೆ.ಎಸ್.ಬಿಜ್ಜರಗಿ ನಿರೂಪಿಸಿದರು, ಪ್ರಲ್ಹಾದ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net